ನವದೆಹಲಿ : ಕೋವಿಡ್ ಹೋರಾಟದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೆರವು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾನುವಾರ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮನ್ ಕಿ ಬಾತ್ ಸಭೆಯಲ್ಲಿ ಹಲವಾರು ವಿಭಾಗದ ತಜ್ಞರ ಜೊತೆ ಪ್ರಧಾನಿ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ವೈದ್ಯಕೀಯ ವಿಭಾಗದವರು, ಆಕ್ಸಿಜನ್ ತಯಾರಿಕಾ ಸಂಸ್ಥೆಗಳ ಮುಖ್ಯಸ್ಥರು ಕೂಡ ಭಾಗಿಯಾಗಿದ್ದರು.
76ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಕೋವಿಡ್ -19 ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಮಯದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನಮ್ಮ ಪ್ರೀತಿಪಾತ್ರರಲ್ಲಿ ಅನೇಕರು ಕೋವಿಡ್ ನಿಂದ ತೀರಿಕೊಂಡಿದ್ದಾರೆ. ಕೋವಿಡ್ ಮೊದಲ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ, ರಾಷ್ಟ್ರದ ಸ್ಥೈರ್ಯ ವಿಶ್ವಾಸ ಹೆಚ್ಚಿದೆ. ಆದರೆ ಈ ಚಂಡಮಾರುತದಂತೆ ಇರುವ ಈ ಕೋವಿಡ್ ಎರಡನೇ ಅಲೆ ದೇಶವನ್ನು ಬೆಚ್ಚಿಬೀಳಿಸಿದೆ ಎಂದು ಮೋದಿ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ದೇಶದಲ್ಲಿ ಪ್ರತಿದಿನ 3 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿ ರಾಷ್ಟ್ರವು ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಆಕ್ಸಿಜನ್ ನಿಂದ ಹಲವು ರಾಜ್ಯಗಳಲ್ಲಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಮೋದಿ ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬೆಂಗಳೂರಿನ ನರ್ಸ್ ಕೂಡ ಭಾಗಿಯಾಗಿದ್ದು, ಕೋವಿಡ್ ಲಕ್ಷಣ ಬಂದರೆ ಐಸೋಲೇಟ್ ಆಗಿ. ಕೋವಿಡ್ ಲಸಿಕೆ ಪಡೆಯಿರಿ. ಯಾವುದೇ ಲಸಿಕೆ ತಕ್ಷಣ ಪರಿಣಾಮ ಬೀರಲ್ಲ ಎಂದು ಸಲಹೆ ನೀಡಿದ್ದಾರೆ.