ಹೊಸದಿಲ್ಲಿ : ಅಮರನಾಥ ಯಾತ್ರೆಗೆ ಮುನ್ನ ಕೇಂದ್ರ ಸರಕಾರ ಭಯೋತ್ಪಾದನೆ ಸಂಬಂಧಿ ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಎನ್‌ಎಸ್‌ಜಿ ಕಮಾಂಡೋ ತಂಡವೊಂದನ್ನು ರವಾನಿಸಿದೆ.
ಎನ್‌ಎಸ್‌ಜಿ ಕಮಾಂಡೋ ತಂಡವನ್ನು ಶ್ರೀನಗದ ಆದ್ಯಂತ ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಯಾವುದೇ ರೀತಿಯ ಒತ್ತೆಸೆರೆ ಪ್ರಕರಣಗಳನ್ನು ನಿಭಾಯಿಸಲು ಸಜ್ಜಾಗಿರುವಂತೆ ಎನ್‌ಎಸ್‌ಜಿ ಕಮಾಂಡೋಗಳಿಗೆ ಸೂಚಿಸಲಾಗಿದೆ. ಅಲ್ಲದೆ ಕಮಾಂಡೋಗಳನ್ನು ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಹೈಜಾಕ್‌ನಂತಹ ಪ್ರಕರಣಗಳನ್ನು ನಿಭಾಯಿಸಲು ಕಟ್ಟೆಚ್ಚರದಲ್ಲಿ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ರಮ್ಜಾನ್ ಮಾಸದಲ್ಲಿ ತಡೆಹಿಡಿಲಾಗಿದ್ದ ಉಗ್ರ ನಿಗ್ರಹ ಸೇನಾ ಕಾರ್ಯಾಚರಣೆಯನ್ನು ರಮ್ಜಾನ್ ಮುಗಿದ ಬೆನ್ನಿಗೇ ಕೇಂದ್ರ ಸರಕಾರ ಪುನರಾರಂಭಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಕಂಡು ಬಂದಿವೆ.
Related Articles
ರಮ್ಜಾನ್ ಮುಗಿದ ಬಳಿಕದಲ್ಲಿ ನಡೆಸಲಾಗಿರುವ ಹಲವಾರು ಎನ್‌ಕೌಂಟರ್‌ಗಳಲ್ಲಿ ಅನೇಕ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಇದೇ ವೇಳೆ ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಭದ್ರತೆಯನ್ನು ಬಿಗಿ ಗೊಳಿಸಲಾಗಿದೆ. ಅಮರನಾಥ ಯಾತ್ರೆಗೆ ಮುನ್ನ ಗಡಿ ನುಸುಳುವ ಉಗ್ರರ ಯತ್ನಗಳನ್ನು ವಿಫಲಗೊಳಿಸಲು ಸರ್ವ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವುದು ಮತ್ತು ಪ್ರತಿ-ಬೇಹುಗಾರಿಕೆಯನ್ನು ತೀವ್ರಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಜಮ್ಮು ಕಾಶ್ಮೀರ ರಾಜ್ಯಪಾಲ ಎನ್ ಎನ್ ವೋರಾ ಅವರು ಭದ್ರತಾ ಪಡೆಗಳಿಗೆ ಅತ್ಯುನ್ನತ ಮಟ್ಟದ ಕಟ್ಟೆಚ್ಚರ ವಹಿಸುವಂತೆ ಆದೇಶಿಸಿದ್ದಾರೆ.