Advertisement

ಭದ್ರಾವತಿ ಉಕ್ಕಿನ ಘಟಕ ಬಿಡ್‌ ಪ್ರಸ್ತಾಪ ರದ್ದು

08:19 PM Oct 12, 2022 | Team Udayavani |

ನವದೆಹಲಿ: ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್‌) ಕರ್ನಾಟಕದ ಭದ್ರಾವತಿಯಲ್ಲಿ ಹೊಂದಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಘಟಕ (ವಿಐಎಸ್‌ಪಿ)ವನ್ನು ಖಾಸಗಿಯವರಿಗೆ ವಹಿಸುವ ಬಿಡ್‌ ಅನ್ನು ರದ್ದುಗೊಳಿಸಿದೆ.

Advertisement

ನಿರೀಕ್ಷೆ ಮಾಡಿದ ಪ್ರಮಾಣದಲ್ಲಿ ಬಿಡ್‌ದಾರರು ಆಸಕ್ತಿ ತೋರಿಸದೆ ಇರುವ ಹಿನ್ನೆಲೆಯಲ್ಲಿ ಉಕ್ಕು ಪ್ರಾಧಿಕಾರ ಈ ನಿರ್ಧಾರಕ್ಕೆ ಬಂದಿದೆ.

ಕೇಂದ್ರ ಸರ್ಕಾರದ ಬಂಡವಾಳ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ವಿಭಾಗ (ಡಿಐಪಿಎಎಂ) ಘಟಕವನ್ನು ಖಾಸಗಿಯವರಿಗೆ ವಹಿಸುವ ನಿಟ್ಟಿನಲ್ಲಿ ಬಿಡ್‌ದಾರರನ್ನು ಆಹ್ವಾನಿಸಿತ್ತು. ಜತೆಗೆ ಹಲವರು ಆಸಕ್ತಿ ತೋರಿಸಿದ್ದಾರೆಂದು ಹೇಳಿತ್ತು.

2019ರ ಜೂನ್‌ನಲ್ಲಿ ಉಕ್ಕು ಪ್ರಾಧಿಕಾರ ಭದ್ರಾವತಿಯಲ್ಲಿ ಇರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಘಟಕದ ಶೇ.100ರಷ್ಟು ಷೇರುಗಳನ್ನು ಮಾರಾಟ ಮಾಡಲು ಬಿಡ್‌ಗಳನ್ನು ಆಹ್ವಾನಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next