ಹೊಸದಿಲ್ಲಿ: ಭಾರತದ್ದೇ ಆದ ಪ್ರತ್ಯೇಕ ವಿಕಿಪೀಡಿಯಾ ಸಿದ್ಧಗೊಳಿಸಲು ಕೇಂದ್ರ ಸರ ಕಾ ರ ನಿರ್ಧರಿಸಿದೆ. ಈ ಬೃಹತ್ ಯೋಜನೆಗಾಗಿ ದೇಶದ ವಿವಿಧ ಐಐಟಿಗಳ ತಜ್ಞರನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ನಿರತವಾಗಿದೆ.
ಈ ಯೋಜನೆಯ ಸುಪರ್ದಿಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ (ಡಿಎಸ್‌ಟಿ) ವಹಿಸಲಾಗಿದೆ.
ಎರಡು ಹಂತಗಳಲ್ಲಿ ಈ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾ ಗಿದೆ. ಮೊದಲ ಹಂತದಲ್ಲಿ ಹಿಂದಿ ಯಲ್ಲಿ ಈ ವಿಕಿಪೀಡಿಯಾ ಬಳಕೆಗೆ ಬರಲಿದೆ. ದ್ವಿತೀಯ ಹಂತದಲ್ಲಿ, ಕನ್ನಡ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ವಿಕಿಪೀಡಿಯಾ ರೂಪಿಸಲಾಗುತ್ತದೆ.
ಯೋಜನೆ ಕುರಿತಂತೆ ಪ್ರತಿಕ್ರಿಯಿ ಸಿರುವ ಡಿಎಸ್‌ಟಿ ಅಧಿಕಾರಿಯೊಬ್ಬರು, “ವಿಕಿಪೀಡಿಯಾದಲ್ಲಿ ಸದ್ಯಕ್ಕೆ ಲಭ್ಯವಿರುವ ಮಾಹಿತಿಯನ್ನು ಮೆಷಿನ್ ಟ್ರಾನ್ಸ್‌ಲೇಶನ್ ಮೂಲಕ ಭಾಷಾಂತರಿ ಸಲಾಗುತ್ತದೆ. ಆನಂತರ, ಆಯಾ ಮಾಹಿತಿಯ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವ ತಜ್ಞರ ಮೂಲಕ ಈ ಲೇಖನಗಳಿಗೆ ಮತ್ತಷ್ಟು ಪೂರಕ ಮಾಹಿತಿಯನ್ನು ಸೇರಿಸಲಾಗುತ್ತದೆ.
ಆರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಮಾಹಿತಿ ಲಭ್ಯವಾಗಲಿದೆ. ಐಐಟಿ ಪಟ್ನಾ, ಐಐಟಿ ಕಾನ್ಪುರ, ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿಯ ತಜ್ಞರು ಮೆಷಿನ್ ಟ್ರಾನ್ಸ್‌ಲೇಶನ್‌ನ ಟೂಲ್‌ಗಳನ್ನು ಸಿದ್ಧಪಡಿಸುತ್ತಾರೆ ಆ ಅಧಿಕಾರಿ ತಿಳಿಸಿದ್ದಾರೆ.