Advertisement

ಪಶ್ಚಿಮ ಬಂಗಾಲ ರಾಜಕೀಯ ಚುನಾವಣಾ ಹಿಂಸೆ: ಕೇಂದ್ರ ಸರಕಾರದ ಕಳವಳ

10:34 AM Jul 03, 2019 | Team Udayavani |

ಹೊಸದಿಲ್ಲಿ : ಪಶ್ಚಿಮ ಬಂಗಾಲದಲ್ಲಿ ಈಚೆಗೆ ನಡೆದಿರುವ ರಾಜಕೀಯ ಹಿಂಸಾ ಪ್ರಕರಣಗಳ ಬಗ್ಗೆ ಆ ರಾಜ್ಯದ ಸರಕಾರಕ್ಕೆ ಕೇಂದ್ರ ಸರಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಕೇಂದ್ರ ಗೃಹ ಸಹಾಯಕ ಸಚಿವ ಜಿ ಕೃಷ್ಣ ರೆಡ್ಡಿ ಅವರು ಇಂದು ಮಂಗಳವಾರ ಹೇಳಿದರು.

Advertisement

ಈಚೆಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ಮತ್ತು ಚುನಾವಣೆ ಮುಗಿದ ಬಳಿಕದಲ್ಲಿ ಪಶ್ಚಿಮ ಬಂಗಾಲದಲ್ಲಿ ನಡೆದಿರುವ ರಾಜಕೀಯ ಹಿಂಸಾ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಈ ಹಿಂಸಾ ಪ್ರಕರಣಗಳಲ್ಲಿ ಹಲವರು ಸಾವು ಸಂಭವಿಸಿ ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಇವರಲ್ಲಿ ಪಶ್ಚಿಮ ಬಂಗಾಲದ ರಾಜಕೀಯ ಕಾರ್ಯಕರ್ತರು ಕೂಡ ಸೇರಿದ್ದಾರೆ ಎಂದು ರೆಡ್ಡಿ ತಿಳಿಸಿದರು.

ಬಾಂಗ್ಲಾದೇಶದ ಜಮಾತ್‌ ಉಲ್‌ ಮುಜಾಹಿದೀನ್‌ ಸಂಘಟನೆ ಪಶ್ಚಿಮ ಬಂಗಾಲದ ಬರ್‌ದ್ವಾನ್‌ ಮತ್ತು ಮುರ್ಷಿದಾಬಾದ್‌ ನಲ್ಲಿನ ಕೆಲವು ಮದ್ರಸಗಳನ್ನು ಬಳಸಿಕೊಂಡು ನೇಮಕಾತಿ ಚಟುವಟಿಕೆಗಳನ್ನು ನಡೆಸಿರುವ ಮಾಹಿತಿ ಕೂಡ ಲಭ್ಯವಾಗಿವೆ ಎಂದು ಸಚಿವ ರೆಡ್ಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next