Advertisement

ಡಿಟೆನ್ಶನ್ ಸೆಂಟರ್ ಯಾವಾಗ ಆರಂಭಿಸಲು ರಾಜ್ಯಕ್ಕೆ ಸೂಚಿಸಲಾಗಿತ್ತು? ಗೃಹ ಸಚಿವಾಲಯದಿಂದ ಬಹಿರಂಗ

10:01 AM Dec 26, 2019 | Nagendra Trasi |

ನವದೆಹಲಿ: ಭಾರತದಲ್ಲಿರುವ ಬಂಧನ ಶಿಬಿರ(ಡಿಟೆನ್ಶನ್ ಸೆಂಟರ್)ಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ ಬಳಿಕ ಇದೀಗ 2009, 2012, 2014 ಮತ್ತು 2018ರಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಬಂಧನ ಶಿಬಿರವನ್ನು ನಿರ್ಮಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ತಿಳಿಸಿದೆ.

Advertisement

ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಅಸ್ಸಾಂನ ಗೋಲಾಪಾರಾ, ಕೊಕ್ರಾಜಹಾರ್, ಸಿಲ್ಚಾರ್, ದಿಬ್ರುಗಢ್, ಜೋಹ್ರಾತ್ ಮತ್ತು ತೇಝ್ ಪುರ್ ಸೇರಿದಂತೆ ಆರು ಡಿಟೆನ್ಶನ್ ಸೆಂಟರ್ ಗಳಿವೆ. ಅಸ್ಸಾಂನ ಬಂಧನ ಶಿಬಿರದಲ್ಲಿ ಒಟ್ಟು 970 ಮಂದಿ ಇದ್ದಾರೆ. ಇದರಲ್ಲಿ 646 ಪುರುಷರು, 324 ಮಹಿಳೆಯರು ಸೇರಿದ್ದಾರೆ. ಅಲ್ಲದೇ ಮೂಲಭೂತ ಸೌಕರ್ಯದ ಜತೆಗೆ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೇ ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಯಾವುದೇ ಪ್ರಕರಣದ ಬಗ್ಗೆ ವರದಿಯಾಗಿಲ್ಲ. ಜನರಿಗೂ ಈ ಶಿಬಿರಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ ಎಂದು ಹೇಳಿದೆ.

ಕರ್ನಾಟಕದಲ್ಲಿಯೂ ಅಕ್ರಮವಾಗಿ ವಾಸಿಸುತ್ತಿದ್ದ ಸುಮಾರು 114 ಬಾಂಗ್ಲಾದೇಶಿಯರನ್ನು ಪತ್ತೆ ಹಚ್ಚಲಾಗಿದ್ದು, ಕೂಡಲೇ ಡಿಟೆನ್ಶನ್ ಸೆಂಟರ್ ಕೆಲಸವನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿರುವುದಾಗಿ ತಿಳಿಸಿದೆ.

ಡಿಟೆನ್ಶನ್ ಸೆಂಟರ್ ಗೂ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೂ, ಸಿಎಎಗೂ ಯಾವುದೇ ಸಂಬಂಧ ಇಲ್ಲ ಎಂದು ಮಂಗಳವಾರ ಅಮಿತ್ ಶಾ ಸ್ಪಷ್ಟನೆ ನೀಡಿದ್ದರು. ಈ ವಿಚಾರದಲ್ಲಿ ತಪ್ಪು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈವರೆಗೂ ಯಾವುದೇ ಡಿಟೆನ್ಶನ್ ಸೆಂಟರ್ ಅನ್ನು ಸ್ಥಾಪಿಸಿಲ್ಲ ಎಂದು ಶಾ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next