Advertisement

Wayanad Tragedy: ಕೇಂದ್ರ ಮುನ್ಸೂಚನೆ ನೀಡಿದರೂ ಕೇರಳ‌ದಿಂದ ನಿರ್ಲಕ್ಷ್ಯ: ಅಮಿತ್‌ ಶಾ

11:47 PM Jul 31, 2024 | Team Udayavani |

ಹೊಸದಿಲ್ಲಿ: ವಯನಾಡಿನಲ್ಲಿ ಭೀಕರ ಭೂ ಕುಸಿತ ಸಂಭವಿಸುವ 7 ದಿನಗಳ ಮೊದಲೇ ಕೇರಳಕ್ಕೆ ಕೇಂದ್ರ ಸರಕಾರ ಅಪಾಯದ ಮುನ್ಸೂಚನೆ ನೀಡಿತ್ತು.

Advertisement

ರಾಷ್ಟ್ರೀಯ ವಿಪತ್ತು ನಿರ್ವಹಣ ದಳವೂ ಕೇರಳಕ್ಕೆ ತೆರಳಿತ್ತು. ಆದರೂ ಕೇರಳ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಜು.23ರಂದು ಮೊದಲನೇ ಬಾರಿ ಎಚ್ಚರಿಕೆ ನೀಡಲಾಗಿತ್ತು, ಜು.24ರಂದು ಇನ್ನೊಮ್ಮೆ ಎಚ್ಚರಿಸಲಾಗಿತ್ತು. ಜು.23 ರಂದೇ ಎನ್‌ಡಿಆರ್‌ಎಫ್ ತಂಡ ಕಳುಹಿ ಸಲಾಗಿತ್ತು. ಇಷ್ಟೆಲ್ಲ ಆದರೂ ಕೇರಳ ಎಚ್ಚೆತ್ತುಕೊಳ್ಳದೇ ಹೋಗಿದ್ದರಿಂದ ಈ ಪರಿಸ್ಥಿತಿ ಸಂಭವಿಸಿದೆ.

ಕೇಂದ್ರ ಸರಕಾರ ಗುಜರಾತ್‌ ಮತ್ತು ಒಡಿಶಾಗಳಿಗೂ ಮಳೆಯಿಂದ ಸಂಭವನೀಯ ಅಪಾ ಯದ ಮುನ್ಸೂಚನೆ ನೀಡಲಾಗಿತ್ತು. ಆ ರಾಜ್ಯಗಳು ಸೂಕ್ತ ಎಚ್ಚರಿಕೆ ವಹಿಸಿದ್ದವು ಎಂದು ಹೇಳಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next