Advertisement

ಎಸ್‌ಪಿಜಿ ಬಗ್ಗೆ ರಾಹುಲ್‌ ಹೇಳಿಕೆ ಆಧಾರರಹಿತ

07:15 AM Sep 25, 2018 | Team Udayavani |

ಹೊಸದಿಲ್ಲಿ: ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಮುಖ್ಯಸ್ಥರು ಆರೆಸ್ಸೆಸ್‌ ಸೂಚಿಸಿದ ಅಧಿಕಾರಿಗಳನ್ನು ಸಮ್ಮತಿಸದ್ದರಿಂದ ಹುದ್ದೆ ತೊರೆಯಬೇಕಾಯಿತು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿರುವುದು ಆಧಾರ ರಹಿತ ಎಂದು ಗೃಹ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಅಲ್ಲದೆ ಇದು ಅವಾಸ್ತವ ಹೇಳಿಕೆ. ಎಸ್‌ಪಿಜಿ ಭದ್ರತೆ ಪಡೆಯುತ್ತಿರುವ ಅವರೇ ಈ ರೀತಿಯ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.

Advertisement

ಮೋದಿ ಅಧಿಕಾರಕ್ಕೆ ಬಂದಾಗ ಎಸ್‌ಪಿಜಿಗೆ ಗುಜರಾತ್‌ ಮೂಲದ ವ್ಯಕ್ತಿಯನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಸ್ವಲ್ಪವೇ ದಿನದಲ್ಲಿ ಅವರು ಹುದ್ದೆ ತೊರೆದಿದ್ದರು. ಆರೆಸ್ಸೆಸ್‌ ಆಯ್ಕೆ ಮಾಡಿದ ಎಸ್‌ಪಿಜಿ ಅಧಿಕಾರಿಗಳ ಪಟ್ಟಿ ತಿರಸ್ಕರಿಸಿದ್ದಕ್ಕಾಗಿ ತನ್ನನ್ನು ಮನೆಗೆ ಕಳುಹಿಸಲಾಯಿತು ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದರು ಎಂದು ರಾಹುಲ್‌ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next