Advertisement

ಟ್ವೀಟರ್‌ ಹೇಳುವುದೇನು?; 250 ಖಾತೆಗಳನ್ನು ತಡೆಹಿಡಿದ ಟ್ವಿಟರ್‌

12:50 PM Feb 02, 2021 | Team Udayavani |

ನವದೆಹಲಿ: ಒಟ್ಟು 250 ಖಾತೆಗಳನ್ನು ಸಾಮಾಜಿಕ ತಾಣ ಟ್ವಿಟರ್‌ ತಡೆಹಿಡಿದಿದೆ. ಈ ಪರಿಸ್ಥಿತಿ ಎದುರಿಸಿರುವ ಖಾತೆಗಳಲ್ಲಿ ಬಹುತೇಕ ಪ್ರಸ್ತುತ ರೈತ ಹೋರಾಟದಲ್ಲಿ ಪಾಲ್ಗೊಂಡವರ ಅಥವಾ ಆ ಹೋರಾಟಕ್ಕೆ ಬೆಂಬಲ ಸೂಚಿಸಿದವರ ಖಾತೆಗಳೇ ಸೇರಿವೆ.

Advertisement

ಇದನ್ನೂ ಓದಿ:ವಿದ್ಯುತ್, ಇಂಟರ್ನೆಟ್ ಸ್ಥಗಿತ: ಫೆ.6ರಂದು ದೇಶಾದ್ಯಂತ ರಸ್ತೆ, ತಡೆ: ರೈತ ಸಂಘಟನೆ

ಈ ಖಾತೆಗಳ ಮೇಲೆ “ನಿಮ್ಮ ಖಾತೆಯನ್ನು ತಡೆಹಿಡಿಯಲಾಗಿದೆ’ ಎಂದು ಬರೆಯಲಾಗಿದೆ. ಅದರ ಕೆಳಗೆ, ಕಾನೂನು ರೀತ್ಯಾ ಬೇಡಿಕೆ ಹಿನ್ನೆಲೆಯಲ್ಲಿ ನಿಮ್ಮ ಖಾತೆಗಳನ್ನು ಭಾರತದಲ್ಲಿ ತಡೆಯಲಾಗಿದೆ ಎಂದು ಬರೆಯಲಾಗಿದೆ. ಮೂಲಗಳ ಪ್ರಕಾರ, ರೈತರ ಹೋರಾಟದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವುದೇ, ಖಾತೆಗಳನ್ನು ತಡೆಹಿಡಿದಿರುವುದರ ಹಿಂದಿನ ಉದ್ದೇಶ.

“ಮೋದಿ ಪ್ಲಾನಿಂಗ್‌ ಫಾರ್ಮರ್ ‌ಜೆನೊಸೈಡ್‌’ ಎಂಬ ಹ್ಯಾಶ್‌ ಟ್ಯಾಗ್‌ ಇಟ್ಟುಕೊಂಡು ಟ್ವೀಟ್‌ ಮಾಡುತ್ತಿದ್ದ ಖಾತೆಗಳೇ ಇದರಲ್ಲಿ ಹೆಚ್ಚಿವೆ ಎನ್ನುವುದು ಗಮನಾರ್ಹ. ಈ ಖಾತೆಗಳ ಮೂಲಕ ನಕಲಿ, ಸಣ್ಣತನದ, ಪ್ರಚೋದನಾಕಾರಿ ಟ್ವೀಟ್‌ಗಳನ್ನು ಮಾಡಲಾಗುತ್ತಿತ್ತು ಎಂದು ಸರ್ಕಾರಿ ಮೂಲಗಳು ಹೇಳಿವೆ ಎಂದು ಎನ್‌ಡಿಟೀವಿ ವರದಿ ಮಾಡಿದೆ.

ತಡೆ ಹಿಡಿಯಲ್ಪಟ್ಟ ಖಾತೆಗಳಲ್ಲಿ ಕಾರಾವಾನ್‌ ನಿಯತಕಾಲಿಕೆ, ಸಿಪಿಎಂ ನಾಯಕ ಮೊಹಮ್ಮದ್‌ ಸಲೀಂ, ಕಿಸಾನ್‌ ಏಕ್ತಾ ಮೋರ್ಚಾ, ಏಕ್ತಾ ಉರಗಹನ್‌ ಮತ್ತು ಆಮ್‌ ಆದ್ಮಿ ಪಕ್ಷದ ಕೆಲವು ಶಾಸಕರ ಖಾತೆಗಳು ಸೇರಿವೆ.

Advertisement

ಟ್ವೀಟರ್‌ ಹೇಳುವುದೇನು?: ಸೂಕ್ತ ಮತ್ತು ಮೌಲ್ಯಯುತವಾದ ಕಾರಣಗಳನ್ನು ಅಧಿಕೃತ ಸಂಸ್ಥೆಗಳು ನೀಡಿದರೆ ಖಾತೆಗಳನ್ನು ತಡೆ ಹಿಡಿಯಲಾಗುತ್ತದೆ ಎಂದು
ಟ್ವಿಟರ್‌ ಹೇಳಿಕೊಂಡಿದೆ.

ಎಚ್ಚರಿಕೆ ಕೊಟ್ಟ ಕೇಂದ್ರ ಸಚಿವ: ಕೃಷಿ ಕಾಯ್ದೆಗಳ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಪ್ರತಿಪಕ್ಷಗಳಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಎಚ್ಚರಿಸಿದ್ದಾರೆ. ಯಾರು ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡುತ್ತಾರೋ, ಅವರಿಗೆ ಈಗಿರುವ ಪ್ರತಿ ಕ್ಷ ಗಳ ಸ್ಥಿತಿಯೇ ಬರಲಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next