ಹೊಸದಿಲ್ಲಿ: ರಾಷ್ಟ್ರೀಯ ಅಣೆಕಟ್ಟು ಸುರಕ್ಷತ ಪ್ರಾಧಿಕಾರ (ಎನ್‌ಡಿಎಸ್‌ಎ) ರಚನೆ ಮಾಡಿ ಕೇಂದ್ರ ಜಲಶಕ್ತಿ ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಕಳೆದ ವರ್ಷದ ಡಿ.8ರಂದು ಸಂಸತ್‌ನಲ್ಲಿ ಅನುಮೋದನೆಗೊಂಡಿರುವ ಅಣೆಕಟ್ಟು ಸುರಕ್ಷತ ಕಾಯ್ದೆಯ ಅನ್ವಯ ಅದನ್ನು ರಚಿಸಲಾಗಿದೆ.
ಅಣೆಕಟ್ಟು ದುರಂತ ತಪ್ಪಿಸಲು, ಅಂತಾರಾಜ್ಯ ವಿವಾದಗಳನ್ನು ಬಗೆಹರಿಸಲು ಈ ಪ್ರಾಧಿಕಾರ ನೆರವಾಗಲಿದೆ. ಎನ್‌ಡಿಎಸ್‌ಎ ಜತೆಗೆ ರಾಜ್ಯ ಮಟ್ಟ ದಲ್ಲಿಯೂ ಪ್ರಾಧಿಕಾರಗಳು ರಚನೆಯಾಗಲಿವೆ ಎಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಅಧ್ಯಕ್ಷ, ನೀತಿ ಮತ್ತು ಸಂಶೋಧನೆ, ತಾಂತ್ರಿಕ, ನಿಯಂತ್ರಣ, ವಿಪತ್ತು ಮತ್ತು ಪರಿಹಾರ, ಆಡಳಿತ ಮತ್ತು ವಿತ್ತೀಯ ಎಂಬ ಐವರು ತಜ್ಞರನ್ನು ಅದು ಹೊಂದಿರಲಿದೆ.
ಜತೆಗೆ ಅದಕ್ಕೆ ನಾಲ್ಕು ಪ್ರಾದೇಶಿಕ ಕಚೇರಿಗಳೂ ಸ್ಥಾಪನೆಯಾಗಲಿವೆ. ಜತೆಗೆ ಅಣೆಕಟ್ಟು ಸುರಕ್ಷತೆಗಾಗಿ 22 ಸದಸ್ಯರ ರಾಷ್ಟ್ರೀಯ ಸಮಿತಿಯನ್ನೂ ರಚಿಸಲಾಗಿದೆ.