Advertisement

ಇ.ಡಿ; ಸಿಬಿಐ ನಿರ್ದೇಶಕರಿಗೆ ಐದು ವರ್ಷದವರೆಗೆ ಅಧಿಕಾರ : ಕೇಂದ್ರ ಸರ್ಕಾರ ಆದೇಶ

07:38 PM Nov 14, 2021 | Team Udayavani |

ನವದೆಹಲಿ : ಕೇಂದ್ರ ತನಿಖಾ ಸಂಸ್ಥೆ ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ)ದ ನಿರ್ದೇಶಕರ ಹುದ್ದೆಯ ಅವಧಿ ವಿಸ್ತರಿಸಲೂ ಇನ್ನು ಅವಕಾಶವಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಭಾನುವಾರ ಎರಡು ಪ್ರತ್ಯೇಕ ಸುಗ್ರಿವಾಜ್ಞೆಗಳನ್ನು ಹೊರಡಿಸಿದೆ. ಹೀಗಾಗಿ, ಹಾಲಿ 2 ವರ್ಷಗಳಿಂದ 5 ವರ್ಷಗಳ ವರೆಗೆ ವಿಸ್ತರಿಸುವ ಅವಕಾಶವೂ ಸಿಗಲಿದೆ. ಇದರೊಂದಿಗೆ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ವರೆಗೆ ನಿಗದಿತ ಅಧಿಕಾರದ ಅವಧಿಯನ್ನು 2 ಸಂಸ್ಥೆಗಳ ನಿರ್ದೇಶಕರು ಪಡೆಯಲಿದ್ದಾರೆ.

Advertisement

ಇ.ಡಿ.ಯ ಹಾಲಿ ನಿರ್ದೇಶಕ 1984ನೇ ಸಾಲಿನ ಐಆರ್‌ಎಸ್‌ ಅಧಿಕಾರಿ ಎಸ್‌.ಕೆ.ಮಿಶ್ರಾ ನಿವೃತ್ತಿಯಾಗಲು ಮೂರು ದಿನಗಳು ಇರುವಂತೆಯೇ ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಕಳೆದ ವರ್ಷವೇ ಮಿಶ್ರಾ ಅವರ ಅಧಿಕಾರದ ಅವಧಿ ಮುಕ್ತಾಯಗೊಂಡಿದ್ದರೂ, 1 ವರ್ಷ ವಿಸ್ತರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ತೀರ್ಮಾನ ಪ್ರಕಟಿಸಿದ್ದ ಸುಪ್ರೀಂಕೋರ್ಟ್‌, ತೀರಾ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಸೇವಾ ವಿಸ್ತರಣೆ ನೀಡಬಹುದು ಎಂದು ಅಭಿಪ್ರಾಯಪಟ್ಟಿತ್ತು. ಆ ಅಭಿಪ್ರಾಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರಿವಾಜ್ಞೆ ಮಹತ್ವದ್ದಾಗಿದೆ. ಸರ್ಕಾರದ ಕ್ರಮಕ್ಕೆ ಟಿಎಂಸಿ, ಸಿಪಿಎಂ ಆಕ್ಷೇಪ ಮಾಡಿವೆ.

ಇದನ್ನೂ ಓದಿ : ದೇವರನ್ನು ಪ್ರಾರ್ಥಿಸಿ ಹುಂಡಿಗೆ ಕನ್ನ ಹಾಕಿದ ಕಳ್ಳ ! ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next