Advertisement

ಭಯೋತ್ಪಾದಕ ರಹಸ್ಯ ಸಂದೇಶಗಳಿಗೆ ಬಳಕೆ: 14 ಆ್ಯಪ್‌ಗಳ ಮೇಲೆ ನಿಷೇಧ ಹೇರಿದ ಕೇಂದ್ರ

10:54 AM May 01, 2023 | Team Udayavani |

ನವದೆಹಲಿ: ಪಾಕಿಸ್ತಾನದ ಉಗ್ರರಿಗೆ ರಹಸ್ಯ ಸಂದೇಶ ಕಳುಹಿಸಲು ಜಮ್ಮು& ಕಾಶ್ಮೀರದ ಕಣಿವೆ ಪ್ರದೇಶದ ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್‌ ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

Advertisement

ಎನಿಗ್ಮಾ, ಸೇಫ್‌ವಿಸ್, ವಿಕ್ರ್ಮೆ, ಮೀಡಿಯಾಫೈರ್, ಕ್ರಿಪ್‌ವೈಸರ್, ಬ್ರಿಯಾರ್, ಬಿಚಾಟ್, ನಂಡ್‌ಬಾಕ್ಸ್, ಕೊನಿಯನ್, ಐಎಂಒ, ಜಂಗಿ, ಥ್ರೀಮಾ ಎಲಿಮೆಂಟ್ ಮತ್ತು ಸೆಕೆಂಡ್ ಲೈನ್ ಆ್ಯಪ್‌ ಗಳನ್ನು ನಿಷೇಧಿಸಿದೆ.

ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಈ ಆ್ಯಪ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಿಸಲಾಗಿದೆ. ಆ್ಯಪ್‌ ಗಳು ಕಣಿವೆಯಲ್ಲಿ ಭಯೋತ್ಪಾದಕ ಕುರಿತಾದ ಪ್ರಚಾರವನ್ನು ಮಾಡುತ್ತಿತ್ತು. ಈ ಆ್ಯಪ್‌ಗಳ ಮೂಲಕ ಉಗ್ರರು ರಹಸ್ಯ ಸಂದೇಶಗಳನ್ನು ಕಣಿವೆಯಲ್ಲಿರುವ ತನ್ನ ಕಾರ್ಯಕರ್ತರಿಗೆ ಕಳುಹಿಸುತ್ತಿದ್ದರು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Viral Video: ವ್ಯಕ್ತಿಯನ್ನು ಕಾರಿನ ಬಾನೆಟ್‌ ಮೇಲೆ 3 ಕಿ.ಮೀ ದೂರ ಎಳೆದೊಯ್ದ ಚಾಲಕ

ದೇಶದ ಭದ್ರತೆಗೆ ಧಕ್ಕೆ ತರುವ ಮೊಬೈಲ್ ಅಪ್ಲಿಕೇಷನ್ ಗಳ ಮೇಲೆ ನಿಷೇಧ ಹೇರಿರುವುದು ಇದೇ ಮೊದಲಲ್ಲ. ಈ ಹಿಂದೆ ಚೀನಾದ ಹಲವು ಅಪ್ಲಿಕೇಷನ್ ಗಳನ್ನು ಸರ್ಕಾರ ನಿಷೇಧಿಸಿದೆ.

Advertisement

ಟಿಕ್‌ ಟಾಕ್‌, ಶೇರ್‌ ಚಾಟ್‌, ಹೆಲೋ, ಲೈಕಿ, ಯುಸಿ ನ್ಯೂಸ್‌, ಬಿಗೋ ಲೈವ್, ಯುಸಿ ಬ್ರೌಸರ್, ಜೆಂಡರ್‌, ಕ್ಯಾಮ್‌ ಸ್ಕ್ಯಾನರ್‌, ಪಬ್‌ ಜಿ, ಫ್ರೀ ಫೈರ್‌ ನಂತರ ಜನಪ್ರಿಯ ಮುಂತಾದ ಜನಪ್ರಿಯ ಮೊಬೈಲ್ ಗೇಮ್‌, ಹಾಗೂ ಆ್ಯಪ್‌ ಸೇರಿದಂತೆ 200 ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next