ನವದೆಹಲಿ: ಮಧ್ಯಪ್ರದೇಶ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಬಿಹಾರ, ನಾಗಲ್ಯಾಂಡ್ ಹಾಗೂ ತ್ರಿಪುರಾ ಸೇರಿದಂತೆ ಆರು ರಾಜ್ಯಗಳಿಗೆ ಶನಿವಾರ ಕೇಂದ್ರ ಸರ್ಕಾರ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಗುಜರಾತ್ ಮಾಜಿ ಮುಖ್ಯಮಂತ್ರಿ, ಹಾಲಿ ಮಧ್ಯಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್ ಅವರನ್ನು ವರ್ಗಾವಣೆಗೊಳಿಸಿ ಉತ್ತರಪ್ರದೇಶದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಬಿಹಾರದ ಗವರ್ನರ್ ಲಾಲ್ ಜಿ ಟಂಡನ್ ಅವರನ್ನು ವರ್ಗಾವಣೆ ಮಾಡಿ ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಸುಪ್ರೀಂಕೋರ್ಟ್ ಹಿರಿಯ ವಕೀಲ ಜಗ್ ದೀಪ್ ಧಾನ್ಕಾರ್ ಅವರನ್ನು ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರರಾಗಿ ನೇಮಕಗೊಂಡಿದ್ದಾರೆ. ಬಿಜೆಪಿಯ ರಮೇಶ್ ಬ್ಯಾಸ್ ತ್ರಿಪುರಾ ಗವರ್ನರ್ ಆಗಿ ನೇಮಕವಾಗಿದ್ದಾರೆ.
ನಾಗಲ್ಯಾಂಡ್ ರಾಜ್ಯಪಾಲರಾಗಿ ಆರ್ ಎನ್ ರವಿ ಅವರನ್ನು ನೇಮಕ ಮಾಡಲಾಗಿದೆ. ಕನ್ನಡಿಗ ಪಿಬಿ ಆಚಾರ್ಯ ಅವರು ನಾಗಲ್ಯಾಂಡ್ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬಿಜೆಪಿ ಶಾಸಕ ಫಗು ಚೌಹಾಣ್ ಅವರನ್ನು ಬಿಹಾರ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.