Advertisement

China ನ್ಯುಮೋನಿಯಾ: ಆಸ್ಪತ್ರೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ರಾಜ್ಯಗಳಿಗೆ ಕೇಂದ್ರ ಸಲಹೆ

04:52 PM Nov 26, 2023 | Vishnudas Patil |

ಹೊಸದಿಲ್ಲಿ: ಚೀನಾದಲ್ಲಿ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳ ಸನ್ನದ್ಧತೆಯ ಕ್ರಮಗಳನ್ನು ತತ್ ಕ್ಷಣವೇ ಪರಿಶೀಲಿಸುವಂತೆ ಕೇಂದ್ರ ಸರಕಾರ ಭಾನುವಾರ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.

Advertisement

ಚೀನಾದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದ್ದು, ಸದ್ಯಕ್ಕೆ ಯಾವುದೇ ಎಚ್ಚರಿಕೆಗೆ ಯಾವುದೇ ಕಾರಣವಿಲ್ಲ” ಎಂದು ಒತ್ತಿ ಹೇಳಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪತ್ರ ಬರೆದಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಔಷಧಗಳು ಮತ್ತು ಇನ್ಫ್ಲುಯೆನ್ಸಕ್ಕೆ ಲಸಿಕೆಗಳು, ವೈದ್ಯಕೀಯ ಆಮ್ಲಜನಕ, ಪ್ರತಿಜೀವಕಗಳು, ವೈಯಕ್ತಿಕ ರಕ್ಷಣ ಸಾಧನಗಳು, ಆಮ್ಲಜನಕ ಸ್ಥಾವರಗಳು ಮತ್ತು ವೆಂಟಿಲೇಟರ್‌ಗಳ ಕಾರ್ಯವೈಖರಿ, ಆರೋಗ್ಯ ಸೌಲಭ್ಯಗಳಲ್ಲಿನ ಸೋಂಕು ನಿಯಂತ್ರಣ ಅಭ್ಯಾಸಗಳು,ಪರೀಕ್ಷಾ ಕಿಟ್‌ಗಳಂತಹ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ಓದಿದೆ.

ಸಣ್ಣ ಮಕ್ಕಳಲ್ಲಿ ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ(ವಾಕಿಂಗ್‌ ನ್ಯುಮೋನಿಯಾ) ಸಾಮಾನ್ಯ ಬ್ಯಾಕ್ಟೀರಿಯಾ ಆಧಾರಿತ ಸಮಸ್ಯೆ ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ಬೀಜಿಂಗ್‌ ಮತ್ತು ಲಿಯನಾನಿಂಗ್‌ ಪ್ರಾಂತ್ಯಗಳ ಆಸ್ಪತ್ರೆಗಳಲ್ಲಿ ಮಕ್ಕಳು ಚಿಕಿತ್ಸೆಗೆ ಆಗಮಿಸುವ ಸಂಖ್ಯೆ ಹೆಚ್ಚಾಗಿದೆ. ಆದರೆ, ಹೊಸ ಸಮಸ್ಯೆಗೆ ಕಾರಣ ಏನು ಎಂಬ ಬಗ್ಗೆ ಅಲ್ಲಿನ ಸರಕಾರ ಸ್ಪಷ್ಟನೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next