ನವದೆಹಲಿ: ಹೊಸ ಸಂಸತ್ ಭವನ, ಪ್ರಧಾನಮಂತ್ರಿಗಳ ಕಚೇರಿ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರೀಯ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ)ಅರ್ಹತೆ ಪಡೆದ ಗುತ್ತಿಗೆದಾರರಿಂದ ಬಿಡ್ ಆಹ್ವಾನಿಸಿದೆ. ಒಟ್ಟು 1,171 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸಂಪುಟ ಕಾರ್ಯಾಲಯ, ರಾಷ್ಟ್ರೀಯ ಭದ್ರತಾ, ಇಂಡಿಯಾ ಹೌಸ್‌ಗಳನ್ನು ನಿರ್ಮಿಸಬೇಕಾಗುತ್ತದೆ.
ಪ್ರಧಾನಮಂತ್ರಿ, ಕೇಂದ್ರ ಸಂಪುಟ ಕಾರ್ಯಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯಕ್ಕಾಗಿಯೇ ನಾಲ್ಕು ಅಂತಸ್ತಿನ ಹೊಸ ಅಂತಸ್ತಿನ ಕಟ್ಟಡವನ್ನು ಹೊಂದಲು ಉದ್ದೇಶಿಸಲಾಗಿದೆ. ಇದರ ಜತೆಗೆ ಎರಡು ಅಂತಸ್ತುಗಳನ್ನು ಹೊಂದಿರುವ 24 ತಿಂಗಳುಗಳಲ್ಲಿ ಕಾಮಗಾರಿ ಪೂರ್ತಿಗಳೊಳಿಸಬೇಕಾಗಿದೆ.
ಬಿಡ್ ದಾಖಲೆಗಳ ಪ್ರಕಾರ ಸದ್ಯ ಇರುವ ಸೌತ್ ಬ್ಲಾಕ್ ಅನ್ನು ಕೆಡವಿ ಹಾಕಿ ಅಲ್ಲಿ ನಾಲ್ಕು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣಗೊಳಿಸುವ ಇರಾದೆ ಸರ್ಕಾರದ್ದು. ಹೊಸ ಕಟ್ಟಡ 87,915 ಚದರ ಅಡಿ ಇರಲಿದೆ. ಇದಲ್ಲದೆ ನೆಲ ಮಹಡಿ ಮತ್ತು ಮೊದಲ ಮಹಡಿಗಳನ್ನು ಹೊಂದಲಿರುವ ಇಂಡಿಯಾ ಹೌಸ್‌ನಲ್ಲಿ ವಿದೇಶಿ ನಿಯೋಗದ ಸದಸ್ಯರ ಜತೆಗೆ ಮಾತುಕತೆ-ಸಮಾಲೋಚನೆ ನಡೆಸಲು ಬಳಕೆ ಮಾಡುವ ಉದ್ದೇಶವಿದೆ. ನ.24ರಂದು ಬಿಡ್ ಅನ್ನು ತೆರೆಯಲು ಉದ್ದೇಶಿಸಲಾಗಿದೆ. ಅವುಗಳಲ್ಲಿ ಅರ್ಹತೆ ಪಡೆದ ಸಂಸ್ಥೆಗಳಿಗೆ ವಿತ್ತೀಯ ಬಿಡ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಗುತ್ತಿಗೆ ಪಡೆದ ಸಂಸ್ಥೆಯೇ ಕೆಲಸ ಪೂರ್ತಿಗೊಂಡು ಐದು ವರ್ಷಗಳ ಕಾಲ ನಿರ್ವಹಣೆಯನ್ನೂ ಮಾಡಬೇಕಾಗುತ್ತದೆ ಎಂದು ಬಿಡ್ ದಾಖಲೆಗಳಲ್ಲಿ ಉಲ್ಲೇಖೀಸಲಾಗಿದೆ.
ಇದನ್ನೂ ಓದಿ:ಹವಾಮಾನ ಬದಲಾವಣೆಯ ನಿರ್ಣಯಗಳ ಬಗ್ಗೆ ಯುವಜನರು ಗಮನಹರಿಸಬೇಕು – ಡಾ. ರಘು
ವಿಳಂಬ ಸಾಧ್ಯತೆ?
ಸೆಂಟ್ರಲ್ ವಿಸ್ತಾ ಯೋಜನೆಯ ಅನ್ವಯ ನಿರ್ಮಾಣವಾಗುತ್ತಿರುವ ಪ್ರಧಾನಮಂತ್ರಿಗಳ ಹೊಸ ನಿವಾಸ ಮತ್ತು ಕಚೇರಿಯ ಕಾಮಗಾರಿ 2022ರ ಡಿಸೆಂಬರ್ ಬಳಿಕವೂ ಮುಂದುವರಿಯುವ ಸಾಧ್ಯತೆ ಇದೆ. ಅದು ನಿರ್ಮಾಣವಾಗಬೇಕಾಗಿರುವ ಸ್ಥಳದಲ್ಲಿ ರಕ್ಷಣಾ ಇಲಾಖೆಯ ಕೆಲವು ಕಚೇರಿಗಳು ಇವೆ. ಅವುಗಳನ್ನು ನವದೆಹಲಿಯ ಕೆ.ಜಿ.ಮಾರ್ಗ್ ಮತ್ತು ಆಫ್ರಿಕಾ ಅವೆನ್ಯೂಗೆ ಮೊದಲು ಸ್ಥಳಾಂತರಿಸಬೇಕಾಗಿದೆ. ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ), ಪ್ರಧಾನಮಂತ್ರಿಗಳ ನಿವಾಸ (ಪಿಎಂಒ)ಗಳ ವಿನ್ಯಾಸ ಇನ್ನೂ ಸಿದ್ಧತೆಯ ಹಂತದಲ್ಲಿಯೇ ಇದೆ ಎಂದು ಯೋಜನೆಯ ಉಸ್ತುವಾರಿ ಹೊತ್ತಿರುವ ಎಚ್‌ಸಿಪಿ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.