ರಾಮನಗರ: ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಕೇಂದ್ರ ಕೃಷಿ ಸಚಿವಾಲಯದ ಉಪ ಕಾರ್ಯ ದರ್ಶಿ ರಾಜೇಶ್ ಜೈಸ್ವಾಲ್ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯದ ಆರ್ಥಿಕ ಸಲಹೆಗಾರರಾಗಿರುವ ಯೋಗಿತಾ ಸ್ವರೂಪ್ ಜಿಲ್ಲೆಯ ಅಧಿಕಾರಿಗಳೊಂದಿಗೆ ಬಿಡದಿ ಹೋಬಳಿಯಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳು, ಮಳೆ ನೀರು ಕೊಯ್ಲು, ಹೂಳೆತ್ತಿರುವ ಕೆರೆಗಳನ್ನು ವೀಕ್ಷಿಸಿದರು.
ಅಧಿಕಾರಿಗಳಿಗೆ ಮಾಹಿತಿ ನೀಡಿದ ತಾಪಂ ಅಧ್ಯಕ್ಷ: ಅಂತರ್ಜಲ ವೃದ್ಧಿಸುವ ಸಲುವಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಯೋಜನೆಗಳನ್ನು ಖುದ್ದು ವೀಕ್ಷಿಸಲು ಆಗಮಿಸಿ ರುವ ಅಧಿಕಾರಿಗಳು ಬಿಡದಿ ಹೋಬಳಿ ಬನ್ನಿಕುಪ್ಪೆ (ಬಿ) ತಾಪಂ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಗಾಣಕಲ್ ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ಅಲ್ಲಿ ಮಳೆ ನೀರು ಕೊಯ್ಲು ವಿಧಾನಗಳು, ಕೊಳವೆ ಬಾವಿ ಮರುಪೂರ್ಣಕ್ಕೆ ಸಹಕಾರಿಯಾಗುವ ಇಂಗುಗುಂಡಿಗಳ ಬಗ್ಗೆ ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್ ಅವರಿಂದ ಮಾಹಿತಿ ಪಡೆದುಕೊಂಡರು.
ಅಧಿಕಾರಿಗಳಿಂದ ಮೆಚ್ಚುಗೆ: ನಂತರ ಅವರು ಕಾಕರಾಮನಹಳ್ಳಿ ಗ್ರಾಮದ ಕೆರೆ, ಹೆಜ್ಜಾಲದಲ್ಲಿ ಗೌಡಯ್ಯನ ಕರೆಗಳಲ್ಲಿ ಹೂಳೆತ್ತಿರುವ ಕಾಮಗಾರಿ, ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಚೆಕ್ ಡ್ಯಾಂಗಳನ್ನು ವೀಕ್ಷಿಸಿದರು. ಅಂಜರ್ತಲ ವೃದ್ಧಿಸಲು ಕೈಗೊಂಡಿರುವ ಈ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕೆರೆ ಹೂಳೆತ್ತುವ ಕಾರ್ಯದಲ್ಲಿ ಬಾಷ್ ಕಂಪನಿಯ ಪ್ರತಿಷ್ಠಾನ, ಗೋಸಾಯಿ ಕಂಪನಿ, ಫೆದರ್‌ಲೈಟ್ ಕಂಪನಿಗಳ ಸಹಕಾರ, ಕೆರೆಯ ಹೂಳನ್ನು ರೈತರು ತಮ್ಮ ಹೊಲಗಳಿಗೆ ಸಾಗಿಸಿ ಸಹಕರಿಸಿದ ಬಗ್ಗೆ ನಟರಾಜ್ ಅಧಿಕಾರಿಗಳಿಗೆ ಮಾಹಿತಿ ಕೊಟ್ಟರು.
ಜಲಶಕ್ತಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ: ಸಾಮಾಜಿಕ ನ್ಯಾಯ ಸಚಿವಾಲಯದ ಆರ್ಥಿಕ ಸಲಹೆ ಗಾರರಾದ ಯೋಗಿತಾ ಸ್ವರೂಪ್ ಮಾತನಾಡಿ, ಅಂತ ರ್ಜಲ ದಿನೇ ದಿನೆ ಕುಸಿಯುತ್ತಿದೆ. ಅದನ್ನು ವೃದ್ಧಿಸಲೇ ಬೇಕಾದ ಅನಿವಾರ್ಯತೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಬೇಕಾಗಿದೆ. ಸರ್ಕಾರದ ಕಾರ್ಯ ಕ್ರಮಗಳನ್ನು ಅವರು ಸಹಭಾಗಿತ್ವ ಬೇಕಾಗಿದೆ. ಇದೇ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಜಲಶಕ್ತಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆ ಯಲ್ಲಿ ಇದು ಯಶಸ್ವಿಯಾಗಬೇಕು ಎಂದರು.
ತಮ್ಮ ಶ್ರಮ ಸಾರ್ಥಕ: ಇದೇ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್, ತಾವು ಪ್ರತಿನಿಧಿಸುತ್ತಿರುವ ತಾಪಂ ಕ್ಷೇತ್ರ ದಲ್ಲಿ ಅಂತರ್ಜಲ ವೃದ್ಧಿಗೆ ಕೈಗೊಂಡ ಕಾರ್ಯಗಳ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ಪ್ರಶಂಸಿದ್ದಾರೆ. ಸ್ಥಳೀಯರು ಸಹ ತಮಗೆ ಸಹಕಾರ ನೀಡಿದ್ದಾರೆ. ತಮ್ಮ ಶ್ರಮ ಸಾರ್ಥಕವಾಗಿದೆ ಎಂದು ಸಂತಸ ಹಂಚಿ ಕೊಂಡರು. ಭೇಟಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾ ರದ ಅಧಿಕಾರಿಗಳು ಸಸಿ ನೆಟ್ಟು ನೀರೆರೆದರು. ಡೀಸಿ ಡಾ.ಕೆ.ರಾಜೇಂದ್ರ ಪ್ರಸಾದ್, ಜಿಪಂ ಸಿಇಓ ಮುಲ್ಲೈ ಮುಹಿಲನ್, ಬನ್ನಿಕುಪ್ಪೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ, ಪಿಡಿಒ ಮಹೇಶ್, ಗ್ರಾಮ ಪಂಚಯ್ತಿ ಸದಸ್ಯರು ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.