Advertisement

ಉತ್ತರ ಪ್ರದೇಶ: 10 ದಿನಗಳಲ್ಲಿ ಡೆಂಗ್ಯೂಗೆ 60 ಬಲಿ

07:25 PM Sep 04, 2021 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 10 ದಿನಗಳಲ್ಲಿ 60 ಮಂದಿ ಡೆಂಗ್ಯೂಗೆ ಬಲಿಯಾಗಿದ್ದಾರೆ.

Advertisement

ಅದರಲ್ಲಿ 50 ಮಂದಿ ಫಿರೋಜಾಬಾದ್‌ನಲ್ಲೇ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಫಿರೋಜಾಬಾದ್‌ನಲ್ಲಿ ಸಾವನ್ನಪ್ಪಿದವರಲ್ಲಿ 40 ಮಕ್ಕಳಿದ್ದಾರೆ. ಅಲ್ಲಿ 200 ಜನರ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಶೇ. 50ರಷ್ಟು ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ.

ಮಥುರಾ, ಫರಿದಾಬಾದ್‌, ಪ್ರಯಾಗ್ ರಾಜ್‌ನಲ್ಲಿ ಡೆಂಗ್ಯೂ ಉಲ್ಬಣಗೊಂಡಿದೆ. ಪ್ರಯಾಗ್ ರಾಜ್ ಸುತ್ತಮುತ್ತ ಒಟ್ಟು 34 ಪ್ರಕರಣಗಳು ವರದಿಯಾಗಿವೆ ಎಂಬುವುದು ಮತ್ತೊಂದು ಆಘಾತಕಾರಿ ವಿಚಾರ.

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 983 ಜನರಲ್ಲಿ ಸೋಂಕು ದೃಢ : 1620 ಸೋಂಕಿತರು ಗುಣಮುಖ

Advertisement

ಇನ್ನು ಡೆಂಗ್ಯೂ ಹಾವಳಿ ಮಧ್ಯೆ ಆರು ಮಂದಿಯ ತಂಡ ಜ್ವರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸೋಮವಾರ ವರದಿ ನೀಡುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಹೆಮರಾಜಿಕ್‌ ಡೆಂಗ್ಯೂ ಪ್ರಕರಣಗಳು ಹೆಚ್ಚಿವೆ. ಇದರಿಂದಾಗಿ ಹೆಚ್ಚಾಗಿ 10 ವರ್ಷದೊಳಗಿನ ಮಕ್ಕಳು ಬಳಲುತ್ತಿದ್ದಾರೆ. ಅವರ ರಕ್ತ ದಲ್ಲಿನ ಬಿಳಿ ರಕ್ತದ ಕಣ ಕಡಿಮೆಯಾಗುತ್ತಿದ್ದು, ರಕ್ತಸ್ರಾವ ಸಮಸ್ಯೆಯೂ ಅತಿಯಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ಚಂದ್ರ ವಿಜಯ್‌ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next