Advertisement

ನರೇಗಲ್ಲ ಹಿರೇ ಕೆರೆಗೆ ಕೇಂದ್ರದ ಅಧಿಕಾರಿ ಭೇಟಿ

03:07 PM Jul 08, 2019 | Team Udayavani |

ನರೇಗಲ್ಲ: ಪಟ್ಟಣದ ಐತಿಹಾಸಿಕ ಹಿರೇ ಕೆರೆಗೆಕೇಂದ್ರ ವಾಣಿಜ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುನೀಲಕುಮಾರ ರವಿವಾರ ಭೇಟಿ ನೀಡಿ ಕೆರೆ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿಯುತ್ತಿದೆ. ಸಕಾಲಕ್ಕೆ ಮಳೆಯಾಗುತ್ತಿಲ್ಲ. ಜಲಮೂಲಗಳು ನಾಶವಾಗುತ್ತಿವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಪುರಾತ ಜಲಮೂಲಗಳ ಸಂರಕ್ಷO ಕಾರ್ಯ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಇದರಂತೆ ಪ್ರತಿಯೊಂದು ಗ್ರಾಮಗಳ ಕೆರೆ ಅಭಿವೃದ್ಧಿಗೆ ಸಾರ್ವಜನಿಕರು ಮುಂದಾದಲ್ಲಿ ಬರಗಾಲದಿಂದ ಮುಕ್ತಿ ಸಿಗಲಿದೆ ಎಂದು ಹೇಳಿದರು.

ಗದಗ ಜಿಲ್ಲೆಯಲ್ಲಿ ಸರಾಸರಿ ಶೇ.55ರಷ್ಟು ಮಳೆಯಾಗುತ್ತಿದೆ. ಅದರಲ್ಲಿ ಅಂದಾಜು ಶೇ. 15ರಷ್ಟು ಮಾತ್ರ ಬಳಕೆಯಾಗುತ್ತಿದೆ. ಇನ್ನುಳಿದ ನೀರು ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಸಾರ್ವಜನಿಕರು, ರೈತರು ಮುಂದೆ ನಿಂತು ಸ್ವಂತ ಹಣದಲ್ಲಿ ಹೂಳೆತ್ತುವ ಕಾರ್ಯದೊಂದಿಗೆ ಕೆರೆ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು ಬಹಳ ಸಂತಸದ ವಿಷಯವಾಗಿದೆ. ಕೆರೆಗೆ ನೀರು ತುಂಬಿಸುವ ಮಾರ್ಗ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಸೂಚಿಸಿದರು.

ನರೇಗಲ್ಲ ನೆಲ, ಜಲ ಸಂರಕ್ಷಣಾ ಸಮಿತಿ ವತಿಯಿಂದ ಹಿರೇ ಕೆರೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಯಿತು. ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಗುರುರಾಜ ಕುಲಕರ್ಣಿ, ಬಸವರಾಜ ವಂಕಲಕುಂಟಿ, ಉಮೇಶ ಸಂಗನಾಳಮಠ, ಕೆ.ಜಿ. ಉಡುಪಿ, ರವೀಂದ್ರನಾಥ ದೊಡ್ಡಮೇಟಿ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಕೆ.ಸಿ. ಜೋಗಿ, ಪ.ಪಂ ಮುಖ್ಯಾಧಿಕಾರಿ ಎಸ್‌.ಎಸ್‌. ಹುಲ್ಲಮ್ಮನವರ, ಇಂಜಿನಿಯರ್‌ ವಿ.ಪಿ. ಕಾಟೇವಾಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಅಬ್ಬಿಗೇರಿಗೆ ಭೇಟಿ: ನರೇಗಲ್ಲ ಹಿರೇಕೆರೆ ವೀಕ್ಷಣೆ ನಂತರ ಅಧಿಕಾರಿಗಳ ತಂಡ ಅಬ್ಬಿಗೇರಿ ಕೋಟುಮಚಗಿ ರಸ್ತೆ ಪುರಾತನ ಕಲಕೇರಿ ಕೆರೆಯನ್ನು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾದ ಒಡ್ಡುಗಳ ಕಾಮಗಾರಿ ವೀಕ್ಷಿಸಿತು. ಜಮೀನಿನ ಬದುವುಗಳಲ್ಲಿ ಸಸಿ ನೆಡಲು ರೈತರಿಗೆ ಪ್ರೇರೇಪಿಸಬೇಕು. ರಸ್ತೆ ಅಕ್ಕ ಪಕ್ಕದಲ್ಲಿಯೂ ಸಸಿಗಳನ್ನು ನೆಡುವ ಕಾರ್ಯವಾಗಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಗುರುತಿಸಿ ಅವುಗಳ ಅಂತರ್ಜಲಮಟ್ಟ ವೃದ್ಧಿಸಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಹರಿದು ಹೋಗದಂತೆ ಸಂಗ್ರಹಿಸಲು ಅಗತ್ಯವಾದ ಯೋಜನೆ ರೂಪಿಸಬೇಕು ಎಂದು ಹೆಚ್ಚುವರಿ ಕಾರ್ಯದರ್ಶಿ ಸುನೀಲಕುಮಾರ ಸಲಹೆ ನೀಡಿದರು.

Advertisement

ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಬಾಲರಡ್ಡಿ, ಇಒ ಎಂ.ವಿ. ಚಳಗೇರಿ, ಯೋಜನಾ ನಿರ್ಧೇಶಕ ಸಂತೋಷ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ಸಿದ್ದೇಶ ಕೋಡಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next