ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಸಾರ್ವಜನಿಕರಿಗೆ ಉಂಟಾದ ಸಮಸ್ಯೆ ತಿಳಿದುಕೊಳ್ಳಲು ಬಿಬಿಎಂಪಿ ಹಾಗೂ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಜಂಟಿಯಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ತಾಂತ್ರಿಕ ಕೇಂದ್ರ ಸ್ಥಾಪನೆ ಮಾಡಿದೆ.
ನಗರದ ಮಾಗಡಿ ರಸ್ತೆಯ ಕುಷ್ಟರೋಗ ಆಸ್ಪತ್ರೆ ಆವರಣದ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ಪಬ್ಲಿಕ್ ಹೆಲ್ತ್)ನಲ್ಲಿ ಕೇಂದ್ರ ಇರಲಿದ್ದು, ಮುಂದಿನ 1ವರ್ಷ ವೈಜ್ಞಾನಿಕ ಅಧ್ಯಯನ ನಡೆಯಲಿದೆ. ಕೇಂದ್ರ ಸ್ಥಾಪನೆಗೆ ಏಷಿಯನ್ ಡೆವಲೆಪ್ಮೆಂಟ್ ಬ್ಯಾಂಕ್ ಸಹಕಾರ ನೀಡಿದೆ.
ಇದನ್ನೂ ಓದಿ : ನೂತನ ಕೃಷಿ ಕಾಯ್ದೆ: ಜನವರಿ 4ರ ಮಾತುಕತೆ ವಿಫಲಗೊಂಡರೆ ಟ್ರ್ಯಾಕ್ಟರ್ ರಾಲಿ: ರೈತ ಸಂಘಟನೆ
ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ನಗರದಲ್ಲಿ ಕೋವಿಡ್ ಹೆಚ್ಚಾದ ವೇಳೆ ಯಾವೆಲ್ಲಾ ಸಮಸ್ಯೆ ಸೃಷ್ಟಿಯಾದವು.ಸಾರ್ವಜನಿಕರಿಗೆ ನಾವು ನೀಡಿದ ಸೇವೆಹೇಗಿತ್ತು ಎನ್ನುವುದು ಈ ಕೇಂದ್ರದ ವರದಿಯಿಂದ ತಿಳಿಯಲಿದೆ. ಇದರಿಂದ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗಲಿದೆ ಎಂದರು.ಕೋವಿಡ್ ಸೋಂಕು ಸೇರಿಮುಂದಿನ ದಿನಗಳಲ್ಲಿ ಎದುರಾಗ ಬಹುದಾದ ಸಮಸ್ಯೆಗೆ ಪೂರ್ವ ಸನ್ನದ್ಧರಾಗಿರಲೂ ಸಹಕಾರಿ. ಈ ಕೇಂದ್ರ ವೈಜ್ಞಾನಿಕವಾಗಿ ಅಧ್ಯಯನ ಮಾಡಲಿದ್ದು, ಉದ್ದೇಶಿತ ಅಧ್ಯಯನಕ್ಕೆ ಪಾಲಿಕೆ ಸಂಪೂರ್ಣ ಸಹಕಾರ ನೀಡಲಿದೆ. ಆದರೆ, ಇದರಿಂದ ಪಾಲಿಕೆಗೆ ಹೆಚ್ಚುವರಿ ಹೊರೆ ಆಗುವುದಿಲ್ಲ ಎಂದರು.
ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ತಂಡದ ಅಧ್ಯಕ್ಷ ಡಾ.ಸುರೇಶಎಸ್.ಶಾಪೇಟಿ, ಕೊರೊನಾ ವೇಳೆ ಪಾಲಿಕೆಆರೋಗ್ಯ ಸೇವೆ ಬಗ್ಗೆ ಸಾರ್ವಜನಿಕರಿಂದಮಾಹಿತಿ ಪಡೆದುಕೊಳ್ಳುತ್ತೇವೆ. ನಗರದಲ್ಲಿನ ಸೂಕ್ಷ್ಮ ಪ್ರದೇಶ, ಕೊಳಗೇರಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬೇಕಾಗಿರುವ ಆರೋಗ್ಯ ಸೇವೆಗೆ ಸಂಬಂಧಿಸಿದ ಅಂಶಗಳನ್ನು ಪಾಲಿಕೆಗೆ ಶಿಫಾರಸ್ಸು ಮಾಡುತ್ತೇವೆ ಎಂದರು.