Advertisement

ಅದಿರು ಗಣಿಯ ದಂಡದ ಮೊತ್ತ ಬಳಕೆಗೆ ಕಾನೂನು ನೆರವು ಯಾಚಿಸಿದ ಮುರುಗೇಶ್ ನಿರಾಣಿ

09:41 PM Feb 06, 2021 | Team Udayavani |

ಬೆಂಗಳೂರು : ಕಬ್ಬಿಣದ ಆದಿರು ಗಣಿ ಕಂಪನಿಗಳಿಂದ ದಂಡದ ರೂಪದಲ್ಲಿ ಸುಪ್ರೀಂಕೋರ್ಟ್ ನಿದೇರ್ಶನದಂತೆ ಕಳೆದ ಆರು ವರ್ಷಗಳಿಂದ ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ರೂ.ನಿಧಿ ಪಡೆಯಲು ಕಾನೂನಿನ ನೆರವು ನೀಡಬೇಕೆಂದು ಸಚಿವ ಮುರುಗೇಶ್ ನಿರಾಣಿ ಅವರು, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.

Advertisement

ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಜೋಶಿ ಅವರನ್ನು ಖುದ್ದು ಭೇಟಿ ಮಾಡಿದ ಗಣಿ ಮತ್ತು ಭೂ‌ ವಿಜ್ಞಾನ ಸಚಿವ ನಿರಾಣಿ ಅವರು ಮಾತುಕತೆ ನಡೆಸಿ, ಸಭೆಯಲ್ಲಿ  ಸಂಗ್ರಹಿಸಿದ ನಿಧಿಯ ವಿಷಯ ಪ್ರಸ್ತಾಪ ಮಾಡಿದರು. ಇದೇ ವೇಳೆ ಗಣಿಗಾರಿಕೆಯಿಂದ  ಹಾನಿಗೊಳಗಾದ ಪ್ರದೇಶಗಳಾದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರುಗಳಿಗೆ ಪುನರ್ವಸತಿ ಕಲ್ಪಿಸಲು – ಸಿಇಪಿಎಂಐಜಡ್  ಅನುಷ್ಠಾನ ಮಾಡಲು ಅವಕಾಶ ನೀಡಬೇಕು. ಇದು ದೀರ್ಘಾವಧಿಯ ಬೇಡಿಕೆಯಾಗಿದ್ದು, ಶೀಘ್ರವೆ ಸೂಕ್ತ ನಿರ್ಧಾರ ತೆಗೆದುಕೊಂಡರೆ, ಹೆಚ್ಚಿನ ಅನುಕೂಲವಾಗಲಿದೆ ಎಂದು ಜೋಶಿ ಅವರಿಗೆ ನಿರಾಣಿಯವರು ಮನವರಿಕೆ ಮಾಡಿಕೊಟ್ಟರು.

ಇದನ್ನೂ ಓದಿ :‘ಆ ದೇವರಿಂದಲೂ ನನ್ನನ್ನು ಹಿಡಿಯಲಾಗುವುದಿಲ್ಲ’ ಎಂದ ಆರೋಪಿಯನ್ನು ಜೈಲಿಗಟ್ಟಿದ ಪೊಲೀಸರು

ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಸಚಿವ ಜೋಶಿ,ಈ ವಿಷಯದ ಕುರಿತು ಹೆಚ್ಚಿನ ಚರ್ಚೆಗಾಗಿ ದೆಹಲಿಗೆ ಬರುವಂತೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next