ಪಾರಂಪರ್ಯ ಆಡಳಿತಕ್ಕೆ ಬಿಜೆಪಿ ಕೊನೆ ಹಾಡಿದ್ದು ದೇಶಕ್ಕಾಗಿ 18 ಗಂಟೆ ಕೆಲಸ ಮಾಡುವ ಪ್ರಧಾನಿ ಸಿಕ್ಕಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
Advertisement
ಪಾಲ್ತಾಡಿಯ ಕುಂಜಾಡಿಯಲ್ಲಿ ನಡೆದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 4ನೇ ವರ್ಷಾಚರಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾ.ಪಂ.ನಿಂದ ಹಿಡಿದು ಲೋಕಸಭೆಯವರೆಗೂ ಅತೀ ಹೆಚ್ಚು ಬಿಜೆಪಿ ಬೆಂಬಲಿರು ಜನಪ್ರತಿನಿಧಿಗಳಿದ್ದಾರೆ. ಆರೋಗ್ಯ ವಿಮೆ, ಜೀವ ವಿಮೆ, ಜನಧನ್ ಯೋಜನೆ, ಉಜ್ವಲ ಯೋಜನೆ ಮೊದಲಾದ ಯೋಜನೆಗಳು ಕಟ್ಟಕಡೆಯ ನಾಗರಿಕನಿಗೂ ತಲುಪಿವೆ. ಎಲ್ಲ ಹಳ್ಳಿಗಳೂ ವಿದ್ಯುದಿಕರಣಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಹುದಿನ ಉಳಿಯುವುದಿಲ್ಲ. ಮುಂದೆ ಲೋಕಸಭೆ-ವಿಧಾನಸಭೆಗೆ ಜತೆಯಲ್ಲೇ ಚುನಾವಣೆ ನಡೆಯಲಿದೆ ಎಂದರು. ನಾಯಕರ ಶ್ರಮ
ಜಿಲ್ಲಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಇಂದು ಬಿಜೆಪಿ ಬಲಿಷ್ಠವಾಗಿದ್ದರೆ ಅದಕ್ಕೆ ಹಿರಿಯ ಬಿಜೆಪಿ ಕಾರ್ಯಕರ್ತರ ಶ್ರಮ ಹಾಗೂ ತ್ಯಾಗದ ಫಲ. ಪಾಲ್ತಾಡಿಯಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಿದ ಹಿರಿಯರಾದ ಬಿ.ಕೆ. ರಮೇಶ್ ಮೊದಲಾದವರ ಶ್ರಮದ ಪ್ರತಿಫಲ ನಾವು ಈಗ ಪಡೆಯುತ್ತಿದ್ದೇವೆ ಎಂದರು. ದಿನೇಶ್ ಮೆದು, ಹಿರಿಯ ಮುಂದಾಳು ಬಿ.ಕೆ. ರಮೇಶ್ ಶುಭ ಹಾರೈಸಿದರು.
Related Articles
Advertisement
ಮಲ್ಲಿಕಾ ಎಲ್. ಶೆಟ್ಟಿ ಪ್ರಾರ್ಥಿಸಿದರು. ಪಾಲ್ತಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಸ್ವಾಗತಿಸಿ, ಬೂತ್ 70ರ ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ ವಂದಿಸಿದರು. ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ. ಅವರು ಕಾರ್ಯಕ್ರಮ ನಿರೂಪಿಸಿದರು.