Advertisement

ಸ್ಕೂಲ್‌ ಬ್ಯಾಗ್‌ ಇನ್ನು ಹಗುರ!

03:05 AM Jul 12, 2017 | Team Udayavani |

ನೀಮಚ್‌: ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿರುವ ಕೇಂದ್ರ ಸರಕಾರ, ಸರಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ ನೀಡಲು ನಿರ್ಧರಿಸಿದೆ. ಶಾಲೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒದಗಿಸುವ ಮೂಲಕ ಅವುಗಳನ್ನು ಡಿಜಿಟಲೀಕರಣಗೊಳಿಸುವುದು ಸರ್ಕಾರದ ಉದ್ದೇಶ. ಆದರೆ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಶಾಲಾ ಬ್ಯಾಗ್‌ನ ಭಾರ ಇಳಿಸುವುದು ಎಂದರೆ ನೀವು ನಂಬಬೇಕು!

Advertisement

ಶಾಲೆಗಳ ಡಿಜಿಟಲೀಕರಣದಿಂದ ಮಕ್ಕಳ ‘ಬ್ಯಾಗ್‌ ಹೊರೆ’ ಇಳಿಸಬಹುದು ಎಂದಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌, ‘ಈ ನಿಟ್ಟಿನಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಿಗೆ ಡಿಜಿಟಲ್‌ ಬೋರ್ಡ್‌ ಮತ್ತು ಅಗತ್ಯ ಸಾಫ್ಟ್ ವೇರ್‌ ಒಳಗೊಂಡಿರುವ ಪ್ರೊಜೆಕ್ಟರ್‌ಗಳನ್ನು ಒದಗಿಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

ನೀಮಚ್‌ ಜಿಲ್ಲೆಯ ಜಾವದ್‌ ತಾಲೂಕಿನಲ್ಲಿ 20 ಹೈಟೆಕ್‌ ಶಾಲೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ‘ಮಕ್ಕಳ ಬ್ಯಾಗ್‌ ಭಾರ ಇಳಿಸುವ ಉದ್ದೇಶದಿಂದ ಸರಕಾರ ಹೊಸ ಯೋಜನೆ ಜಾರಿಗೆ ತರಲಿದೆ. ಯೋಜನೆಯ ಭಾಗವಾಗಿ ಜಾವದ್‌ ಜಿಲ್ಲೆಯ 20 ಶಾಲೆಗಳಿಗೆ ಎಲ್‌ಸಿಡಿ ಸ್ಕ್ರೀನ್‌ಗಳು, ಪ್ರೊಜೆಕ್ಟರ್‌ಗಳನ್ನು ನೀಡಿದ್ದು, ಶೀಘ್ರದಲ್ಲೇ  ಸಾಫ್ಟ್ವೇರ್‌ ಒದಗಿಸುವ ಜತೆಗೆ, ಈ ಶಾಲೆಗಳಲ್ಲಿನ ಶಿಕ್ಷಕರಿಗೆ ತಂತ್ರಜ್ಞಾನದ ಕುರಿತು ಅಗತ್ಯ ತರಬೇತಿ ನೀಡಲಾಗುವುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next