Advertisement
ಜವಾಹರ್ ನವೋದಯ ವಿದ್ಯಾಲಯದ ಮಾದರಿ ಯಲ್ಲೇ ವಿದ್ಯಾರ್ಥಿಗಳಿಗೆ ಉಚಿತ ವಸತಿಯುತ ಶಿಕ್ಷಣ ಇಲ್ಲಿ ದೊರೆಯಲಿದೆ. ಸದ್ಯ ರಾಜ್ಯದ 12 ಜಿಲ್ಲೆಗಳಲ್ಲಿ ಮಾತ್ರ ಏಕಲವ್ಯ ಮಾದರಿ ವಸತಿ ಶಾಲೆಗಳಿವೆ. ಪ.ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಕಲಿಕೆಗೆ ಅವಕಾಶ. 6ರಿಂದ 12ನೇ ತರಗತಿಯ ವರೆಗೆ ಕೇಂದ್ರೀಯ ಪಠ್ಯಕ್ರಮ (ಸಿಬಿಎಸ್‌ಸಿ)ದೊಂದಿಗೆ ಕಲಿಯಲು ಅವಕಾಶ ವಿದ್ದು, 5ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು 6ನೇ ತರಗತಿಗೆ ಪ್ರವೇಶ ಪಡೆಯಬಹುದು.
Related Articles
Advertisement
ಏಕಲವ್ಯ ಶಾಲೆ; 6ರಿಂದ 12ರ ವರೆಗೆ ಉಚಿತ ಶಿಕ್ಷಣ6ರಿಂದ 10ನೇ ತರಗತಿಯವರೆಗೆ ಪ್ರತೀ ತರಗತಿಯಲ್ಲಿ ತಲಾ 40 ಮಕ್ಕಳಿಗೆ ಅವಕಾಶವಿದ್ದರೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪಿಯು ಶಿಕ್ಷಣಕ್ಕೆ ತಲಾ 80 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ದೊರಕಲಿದೆ. ರಾಜ್ಯ ಸರಕಾರ ನಿವೇಶನ ಹಾಗೂ ಕೇಂದ್ರ ಸರಕಾರದ ಅನುದಾನ ಇರುತ್ತದೆ. ತರಗತಿ ಕೊಠಡಿಗಳು, ವಿಜ್ಞಾನ ಪ್ರಯೋಗ ಶಾಲೆ, ಗ್ರಂಥಾಲಯ, ಆಡಿಟೋರಿಯಂ, ಕಂಪ್ಯೂಟರ್ ಲ್ಯಾಬ್, ಅಡುಗೆ ಕೋಣೆ, ಡೈನಿಂಗ್ ಜತೆಗೆ ಸಿಬಂದಿ ವಸತಿಗೃಹ ಇರಲಿದೆ.
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾಗುವ ಪ್ರತೀ ವಿದ್ಯಾರ್ಥಿಯ ಆಹಾರ, ಸಮವಸ್ತ್ರ, ಶೂ, ಲೇಖನ ಸಾಮಗ್ರಿ, ಪಠ್ಯಪುಸ್ತಕ, ಇತರ ಸಾಮಗ್ರಿ ಸಹಿತ ವಾರ್ಷಿಕ 1.09 ಲಕ್ಷ ರೂ.ಗಳನ್ನು ಕೇಂದ್ರ ಸರಕಾರ ಒದಗಿಸಲಿದೆ. ಹಾಸ್ಟೆಲ್, ಸಿಬಂದಿ ವಸತಿಗೃಹ ಸಹಿತ ಶಾಲಾ ಸಂಕೀರ್ಣಕ್ಕಾಗಿ 20 ಕೋಟಿ ರೂ.ವರೆಗೆ ಖರ್ಚು ಮಾಡಬಹುದಾಗಿದೆ. ಉಭಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ
“50 ಸಾವಿರ ಪರಿಶಿಷ್ಟ ಪಂಗಡ ಜನರು ಅಥವಾ 20 ಸಾವಿರ ಬುಡಕಟ್ಟು ಮಂದಿ ಇರುವ ತಾಲೂಕಿಗೆ ಸಂಬಂಧಿಸಿ ಏಕಲವ್ಯ ಶಾಲೆ ಜಿಲ್ಲೆಯಲ್ಲಿ ಆರಂಭಕ್ಕೆ ಅವಕಾಶ ಇದೆ. 2011ರ ಜನಗಣತಿ ಪ್ರಕಾರ 82 ಸಾವಿರ ಪರಿಶಿಷ್ಟ ಪಂಗಡ ಜನರು ದ.ಕ. ಜಿಲ್ಲೆಯಲ್ಲಿದ್ದಾರೆ. ಇವರಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಏಕಲವ್ಯ ಶಾಲೆ ಅಗತ್ಯವಿದೆ ಎಂಬ ನೆಲೆಯಿಂದ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗುತ್ತಿದೆ. ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಸ್ಥಳ ಗುರುತಿಸಲು ಸೂಚನೆ ಬಂದಿದ್ದು, ಪರಿಶೀಲನೆಯೂ ನಡೆಯುತ್ತಿದೆ. ದ.ಕ. ಜಿಲ್ಲೆಯಲ್ಲಿ ಈ ಶಾಲೆ ಆರಂಭವಾದರೆ ಉಡುಪಿ ಸಹಿತ ಸಮೀಪದ ಜಿಲ್ಲೆಗಳ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೂ ಅವಕಾಶ ದೊರಕಲಿದೆ.”
-ಬಸವರಾಜು ಎಚ್.ಸಿ., ಐಟಿಡಿಪಿ ಜಿಲ್ಲಾ ಅಧಿಕಾರಿ, ದ.ಕ.