Advertisement

ಸ್ಥಿರಾಸ್ತಿ ನೋಂದಣಿಗೆ ಆಧಾರ್‌, ಪ್ಯಾನ್‌ ಕಡ್ಡಾಯ?

09:36 AM May 23, 2020 | Hari Prasad |

ಹೊಸದಿಲ್ಲಿ: ಸ್ಥಿರಾಸ್ತಿ ನೋಂದಾವಣಿ ಪ್ರಕ್ರಿಯೆಯ ವೇಳೆ ಆಧಾರ್‌ ಅಥವಾ ಪ್ಯಾನ್‌ ಕಾರ್ಡ್‌ ಸಂಖ್ಯೆಯನ್ನು ಕಡ್ಡಾಯಗೊಳಿಸುವ ಕುರಿತಂತೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.

Advertisement

ಈ ಮೂಲಕ, ಅಕ್ರಮ ಹಾಗೂ ಬೇನಾಮಿ ಆಸ್ತಿಗಳ ಪತ್ತೆ ಹಾಗೂ ನಿಯಂತ್ರಣಕ್ಕೆ ಕೇಂದ್ರ ಸಜ್ಜಾಗಿದೆ.

‘ಈ ಹೊಸ ಕಾನೂನು ಜಾರಿಗೊಳಿಸಲು, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುವ ಭೂ ಸಂಪನ್ಮೂಲ ಇಲಾಖೆ (ಡಿಒಎಲ್‌ಆರ್‌), ಸದ್ಯದಲ್ಲೇ ಭೂ ನೋಂದಾವಣಿ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದೆ.

ಈ ಕುರಿತಂತೆ ಹೊಸ ಕಾಯ್ದೆಯನ್ನು (ತಿದ್ದುಪಡಿ) ಮುಂಬರುವ ಸಂಸತ್‌ ಅಧಿವೇಶನದಲ್ಲೇ ಮಂಡಿಸಲು ನಿರ್ಧರಿಸಲಾಗಿದೆ’ ಎಂದು ‘ದ ಪ್ರಿಂಟ್‌’ ವರದಿ ಮಾಡಿದೆ. ‘ಅಸಲಿಗೆ, 2013ರಲ್ಲೇ ಈ ಕುರಿತಂತೆ ಮಸೂದೆಯನ್ನು ಸಿದ್ಧಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next