Advertisement

ಕೋವಿಡ್ ಕಳವಳ ಭಾರತ ಲಾಕ್ ಡೌನ್: ಮಾಧ್ಯಮ ಸೇವೆಗೆ ನಿರಂತರ ಅವಕಾಶ ಕೊಡಿ: ಕೇಂದ್ರ

11:18 AM Mar 27, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ಏಕಾಏಕಿ ಹರಡಿದ್ದರ ಹಿನ್ನೆಲೆಯಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮದ ಕಾರ್ಯಾಚರಣೆಯ ನಿರಂತ ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒತ್ತಾಯಿಸಿದೆ.

Advertisement

ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯ ದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಟಿವಿ ಚಾನೆಲ್‌ಗ‌ಳು, ಮುದ್ರಣ ಮಾಧ್ಯಮಗಳು, ಸುದ್ದಿ ಸಂಸ್ಥೆಗಳು ಸಮಯೋಚಿತ ಮತ್ತು ಅಧಿಕೃತ ಮಾಹಿತಿ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿರುವ ಸಚಿವಾಲಯ, ಇವುಗಳು ಜನರಲ್ಲಿ ಸರಿಯಾದ ಮಾಹಿತಿ ನೀಡುತ್ತಿರುವುದಲ್ಲದೆ, ಜಾಗೃತಿ ಮೂಡಿಸುತ್ತಿವೆ. ಇದಲ್ಲದೆ ದೇಶವನ್ನು ಇನ್ನಷ್ಟು ಹೆಚ್ಚಿನ ಸ್ಥಾನಮಾನದಲ್ಲಿಡುವುದಕ್ಕೂ ಸೇವೆ ಅಗತ್ಯವಾಗಿದ್ದು, ಸುಳ್ಳು ಹಾಗೂ ನಕಲಿ ಸುದ್ದಿಗಳನ್ನೂ ಸಹ ತಪ್ಪಿಸಬೇಕಾದಂತಹ ಕೆಲಸ ಆಗಬೇಕಿದೆ ಎಂದು ಪತ್ರದಲ್ಲಿ ತಿಳಿಸಿದೆ.

ಈ ಮಾಧ್ಯಮ ಹಾಗೂ ಇತರ ಎಲ್ಲ ನೆಟ್‌ವರ್ಕ್‌ಗಳು ಉತ್ತಮ ಅಭ್ಯಾಸಗಳನ್ನು ಉತ್ತೇಜಿಸಬೇಕಾಗಿದ್ದು, ಅದನ್ನು ಖಾತರಿಪಡಿಸಲು ಪ್ರಮುಖ ಪಾತ್ರ ವಹಿಸುತ್ತಿವೆ. ಹಾಗಾಗಿ ಈ ಸೇವೆಗಳ ಕಾರ್ಯದ ಅನುಕೂಲಕ್ಕಾಗಿ ರಾಜ್ಯ ಸರಕಾರಗಳು ಹಾಗು ಕೇಂದ್ರಾಡಳಿತ ಪ್ರದೇಶಗಳ ಪ್ರೋತ್ಸಾಹ ಅಗತ್ಯ ಎಂದು ಪತ್ರದ ಮೂಲಕ ಒತ್ತಾಯಿಸಿದೆ.

ಈ ಸೇವೆಗಳಲ್ಲಿ ಟಿವಿ ಚಾನೆಲ್‌ಗ‌ಳು, ಸುದ್ದಿ ಏಜೆನ್ಸಿಗಳು, ಟೆಲಿಫೋನ್‌ ಆಪರೇಟರ್‌ಗಳು, ಡಿಜಿಟಲ್‌ ಆಪರೇಟರ್‌ಗಳು, ಡಿಜಿಟಲ್‌ ಸ್ಯಾಟಲೈಟ್‌, ರೇಡಿಯೋ ಮತ್ತು ಸಮುದಾಯ ರೇಡಿಯೋ ಕೇಂದ್ರಗಳು ಸೇರಿ ಇತರ ಸೇವೆಗಳಿಗೆ ಈ ಕೊರೊನಾ ವೈರಸ್‌ ತಡೆಗಟ್ಟಲು ಯಾವುದೇ ನಿರ್ಬಂಧ ವಿಧಿಸಲು ಆಲೋಚಿಸದೆ ಎಲ್ಲರಿಗೂ ಕಾರ್ಯಾಚರಣೆಯಲ್ಲಿರಲು ಅನುಮತಿ ನೀಡಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಇನ್ನು ಈ ರಂಗದಲ್ಲಿ ಸೇವೆ ಸಲ್ಲಿಸುವ ಸಿಬಂದಿಗೆ ಸೌಲಭ್ಯಗಳನ್ನು
ಒದಗಿಸುವುದರ ಜತೆಗೆ ಸಿಬಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕು. ಇದರೊಂದಿಗೆ ಮಾಧ್ಯಮದವರು, ಡಿಎಸ್‌ಎನ್‌ಜಿಗಳು ಸೇರಿದಂತೆ ಇತರರನ್ನು ಕರೆದೊಯ್ಯುವ ವಾಹನಗಳಿಗೆ ಇಂಧನ ಒದಗಿಸುವುದು ಸೇರಿದಂತೆ ಎಲ್ಲಿ ಬೇಕಾದರೂ ಅವುಗಳು ಸಂಚರಿಸ ಬಹುದಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next