Advertisement

ತುಟ್ಟಿ ಭತ್ತೆ ಹೆಚ್ಚಳಕ್ಕೆ ಕೇಂದ್ರ ಸರಕಾರ ತಡೆ

11:27 AM Apr 24, 2020 | Sriram |

ಹೊಸದಿಲ್ಲಿ: ಕೋವಿಡ್ 19 ಸೋಂಕಿನ ಬಳಿಕ ಆಗಿರುವ ಆರ್ಥಿಕ ಸಂಕಷ್ಟಗಳು ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ತೆ(ಡಿಎ) ಮತ್ತು ಪಿಂಚಣಿದಾರರ ತುಟ್ಟಿ ಭತ್ತೆ ಮೇಲೂ ಪರಿಣಾಮ ಬೀರಿವೆ. ಈ ಎರಡೂ ಭತ್ತೆಗಳ ಹೆಚ್ಚಳಕ್ಕೆ ಕೇಂದ್ರ ಸರಕಾರ ಒಂದು ವರ್ಷದ ವರೆಗೆ ಬ್ರೇಕ್‌ ಹಾಕಿದೆ.

Advertisement

ಅಂದರೆ, ಮುಂದಿನ ವರ್ಷದ ಜು.1ರ ವರೆಗೆ ಕೇಂದ್ರ ಸರಕಾರ ತುಟ್ಟಿ ಭತ್ತೆ ಹೆಚ್ಚಿಸುವುದಿಲ್ಲ. ಅಷ್ಟೇ ಅಲ್ಲ, 2020ರ ಜನವರಿಯಿಂದ ಅನ್ವಯವಾಗುವಂತೆ ಮಾಡಬೇಕಾಗಿದ್ದ ತುಟ್ಟಿ ಭತ್ತೆ ಹೆಚ್ಚಳ ನಿರ್ಧಾರವನ್ನೂ ಕೈಬಿಡಲಾಗಿದೆ.

ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ದೇಶದ ಎಲ್ಲ ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರು ಶೇ. 17 ರಂತೆಯೇ ತುಟ್ಟಿ ಭತ್ತೆ ಪಡೆಯಲಿದ್ದಾರೆ.

ಮಾರ್ಚ್‌ನಲ್ಲಷ್ಟೇ ಅಂದರೆ, ಲಾಕ್‌ಡೌನ್‌ ಶುರುವಾಗುವ ಮುನ್ನವೇ ಕೇಂದ್ರ ಸಂಪುಟ ಸಭೆಯಲ್ಲಿ ಶೇ. 4 ತುಟ್ಟಿ ಭತ್ತೆ ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ನೌಕರರು ಮತ್ತು ಪಿಂಚಣಿದಾರರು 2020ರ ಜನವರಿಯಿಂದಲೇ ಶೇ. 21ರ ದರದಲ್ಲಿ ತುಟ್ಟಿ ಭತ್ತೆ ಪಡೆಯ ಬೇಕಾಗಿತ್ತು. ಆದರೆ ಕೇಂದ್ರ ಸರಕಾರ, ಗುರುವಾರ ತೆಗೆದುಕೊಂಡ ನಿರ್ಧಾರದಂತೆ ಮಾರ್ಚ್‌ನಲ್ಲಿ ಆದ ಸಂಪುಟ ತೀರ್ಮಾನವನ್ನೂ ಕೈಬಿಡಲಾಗಿದೆ.

ಈ ಹಣ ಮುಂದೆ ಸಿಗುತ್ತಾ?
ಆರ್ಥಿಕ ದುಃಸ್ಥಿತಿ ಇರುವ ಕಾರಣ ತುಟ್ಟಿ ಭತ್ತೆ, ಪಿಂಚಣಿದಾರರ ಭತ್ತೆಯನ್ನು ಫ್ರೀಜ್‌ ಮಾಡಿದ್ದೇವೆ ಎಂದು ಹಣ ಕಾಸು ಇಲಾಖೆ ಹೇಳಿದೆ. ಅಂದರೆ ಇದು ರದ್ದು ಅಲ್ಲ, ತಡೆ ಅಷ್ಟೇ. 2021ರ ಜುಲೈ ಯಲ್ಲಿ ಪರಿಷ್ಕರಣೆ ನಡೆಸುವಾಗ ತುಟ್ಟಿ ಭತ್ತೆ ಹೆಚ್ಚಿಸುವ ಪ್ರಸ್ತಾವವನ್ನು ಮತ್ತೆ “ಪ್ರ„ಸ್‌ ಇಂಡೆಕÕ…’ ಕಡ್ಡಾಯವಾಗಿ ಮಾಡುತ್ತದೆ. ಆ ವೇಳೆ ಈಗ ತಡೆ ಹಿಡಿದಿರುವ ಭತ್ತೆಯನ್ನು ಸರಕಾರ ನೀಡಲೂಬಹುದು, ನೀಡದೆಯೂ ಇರಬಹುದು. ಇದು ಆ ಸಂದರ್ಭದ ಆರ್ಥಿಕ ಸನ್ನಿವೇಶವನ್ನು ಆಧರಿಸಿದೆ.

Advertisement

ಸರಕಾರಕ್ಕೆಷ್ಟು ಉಳಿತಾಯ?
ತುಟ್ಟಿಭತ್ತೆ ತಡೆಯಿಂದಾಗಿ 37,350 ಕೋಟಿ ರೂ. ಉಳಿತಾಯವಾಗಲಿದೆ. ರಾಜ್ಯ ಸರಕಾರಗಳೂ ಇದೇ ನೀತಿ ಯನ್ನು ಅನುಸರಿಸಿದರೆ, 82,566 ಕೋಟಿ ರೂ. ಉಳಿಸಬಹುದು.

ರಾಜ್ಯದಲ್ಲೇನು?
ಸಾಮಾನ್ಯವಾಗಿ ಕೇಂದ್ರ ಅನುಸರಿಸಿದ ನೀತಿಯನ್ನೇ ರಾಜ್ಯ ಸರಕಾರಗಳು ಪಾಲಿಸುತ್ತವೆ. ಆದರೆ ಇದು ಕಡ್ಡಾಯ ಆಗಿರುವುದಿಲ್ಲ. ರಾಜ್ಯಗಳ ಆರ್ಥಿಕ ಪರಿಸ್ಥಿತಿ ಆಧರಿಸಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಅವಕಾಶವಿದೆ.

ಏನಿದು ತುಟ್ಟಿಭತ್ತೆ?
ಇದು ಸರಕಾರಿ ನೌಕರರಿಗೆ ವರ್ಷದಲ್ಲಿ 2 ಬಾರಿ ಸಿಗುವಂಥ ಸೌಲಭ್ಯ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಜೀವನ ವೆಚ್ಚ- ಇತ್ಯಾದಿಗಳನ್ನು ಆಧರಿಸಿ “ಪ್ರ„ಸ್‌ ಇಂಡೆಕ್ಸ್‌’ ವರ್ಷಕ್ಕೆ ಎರಡು ಸಲ ನಿರ್ದಿಷ್ಟ ಭತ್ತೆ ಹೆಚ್ಚಳದ ಪ್ರಸ್ತಾವವನ್ನು ಸರಕಾರದ ಮುಂದಿಡುತ್ತದೆ. ಪ್ರತಿ ವರ್ಷದ ಮಾರ್ಚ್‌, ಸೆಪ್ಟಂಬರ್‌ನಲ್ಲಿ ಈ ಪ್ರಕ್ರಿಯೆ ನಡೆಯುತ್ತಿತ್ತು. ಸರಕಾರ ಸಂಪುಟದ ಒಪ್ಪಿಗೆ ಮೇರೆಗೆ ಅದನ್ನು ಜಾರಿ ಮಾಡುತ್ತಿತ್ತು.

ಎಷ್ಟು ಮಂದಿ ಮೇಲೆ ಪರಿಣಾಮ?
ಪ್ರಸ್ತುತ 50 ಲಕ್ಷ ಕೇಂದ್ರ ಸರಕಾರಿ ನೌಕರರು, 65 ಲಕ್ಷ ಪಿಂಚಣಿ ದಾರರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next