Advertisement

ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ: ಕಾರ್ಮಿಕರ ಅಂತಾರಾಜ್ಯ ಸಂಚಾರಕ್ಕಿಲ್ಲ ಅವಕಾಶ

03:24 AM Apr 20, 2020 | Hari Prasad |

ಸೋಮವಾರದಿಂದ ದೇಶದ ಗ್ರಾಮೀಣ ಭಾಗಗಳಲ್ಲಿ ಕೆಲವು ವಲಯಗಳಿಗೆ ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ ಉಂಟಾಗಲಿದೆ. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿದೆ. ಅದರ ಪ್ರಕಾರ…

Advertisement

– ವಲಸೆ ಕಾರ್ಮಿಕರು ಯಾವ ರಾಜ್ಯದಲ್ಲಿ ನೆಲೆಸಿದ್ದಾರೋ ಅಲ್ಲಿಯೇ ಅವರಿಗೆ ಸಂಚಾರಕ್ಕೆ ಅವಕಾಶ. ಸ್ಥಳೀಯ ಆಡಳಿತದ ವ್ಯಾಪ್ತಿಯಲ್ಲಿ ಕೆಲಸಕ್ಕಾಗಿ ನೋಂದಣಿ ಮಾಡಿಸಬೇಕು. ಕಾರ್ಮಿಕರ ಕೌಶಲ್ಯವನ್ನು ಗಮನಿಸುವಂಥ ಕಾರ್ಯಕ್ರಮ ಹಮ್ಮಿಕೊಂಡು ಆ ಕಾರ್ಮಿಕರು ಯಾವ ಕಾಮಗಾರಿಗೆ ಸೂಕ್ತ ಎಂಬುದನ್ನು ಗುರುತಿಸಿ, ಆಯಾ ಕಾಮಗಾರಿಗೆ ಅವರನ್ನು ನಿಯೋಜಿಸಬೇಕು.

– ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕಾಮಗಾರಿಗಳಿಗೆ ಕೂಲಿಯಾಳುಗಳನ್ನು ಸಾಗಿಸುವ ಹೊಣೆಯನ್ನು ಜಿಲ್ಲಾಡಳಿತಗಳೇ ಹೊರಬೇಕು. ಕೂಲಿಯಾಳುಗಳು ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕಡೆಯಲ್ಲೇ ಕೆಲಸ ನಿರ್ವಹಿಸಲು ಬಯಸಿದರೆ ಹಾಗೂ ಅವರು ಬಯಸುವ ಕೆಲಸದ ಸ್ಥಳ ರಾಜ್ಯದೊಳಗೇ ಇದ್ದರೆ ಅವರನ್ನು ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು.

– ವಲಸೆ ಕಾರ್ಮಿಕರಿಗೆ ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ಇಲ್ಲ.

– ನಿಗದಿತ ಪ್ರದೇಶಕ್ಕೆ ಬಸ್‌ಗಳಲ್ಲೇ ಕರೆದೊಯ್ಯಬೇಕು. ಕರೆದೊಯ್ಯುವ ಮುನ್ನ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.

Advertisement

– ಅವರನ್ನು ಕರೆದೊಯ್ಯುವ ಬಸ್‌ಗಳನ್ನು ಕ್ರಿಮಿನಾಶಕಗಳಿಂದ ಶುದ್ಧಗೊಳಿಸಿರಬೇಕು. ಅವರನ್ನು ಕೊಂಡೊಯ್ಯುವಾಗ ಬಸ್‌ನೊಳಗೆ ಕಾರ್ಮಿಕರ ನಡುವೆ ಅಂತರವಿರುವಂತೆ ಅವರನ್ನು ಕೂರಿಸಬೇಕು

– ಪ್ರತಿಯೊಬ್ಬ ಕೂಲಿಯಾಳನ್ನೂ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಅವರು ಸೋಂಕಿತರಲ್ಲ ಎಂದು ಕಂಡುಬಂದರಷ್ಟೇ ಅವರನ್ನು ಕಾಮಗಾರಿಗೆ ಕರೆದೊಯ್ಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next