Advertisement
ನಗರದ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆಸ್ತಿ ನಗದೀ ಕರಣ ಮಾಡುವ ಯೋಜನೆ 1991ರಿಂದಲೂ ನಡೆಯುತ್ತಿದೆ. ಆದರೆ ಹಿಂದೆ ಆಸ್ತಿ ನಿರ್ವಹಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿತ್ತು. ಭ್ರಷ್ಟಾಚಾರದಿಂದ ಹೊರತರುವುದು ಹಾಗೂ ಉತ್ಪಾದನಾ ಘಟಕವಾಗಿ ಪರಿವರ್ತಿ ಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ದಶಪಥ ರಸ್ತೆ ಯೋಜನೆ ಕ್ರೆಡಿಟ್ ಪಡೆಯಲು ಕಿತ್ತಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವರು ಚಂದ್ರಲೋಕದ ಸೈಟಿಗೆ ಈಗಲೇ ಅರ್ಜಿ ಹಾಕಿಸಿ ಬಿಡುತ್ತಾರೆ. ಈಗಲೇ ಹೋಗಿ ಅಲ್ಲಿ ಮನೆ ಕಟ್ಟೋಕ್ಕಾಗುತ್ತಾ?, ಕೆಲವರು ಅರ್ಜಿ ಹಾಕಿ ಕೊನೆಗೆ ನಾನೇ ಅರ್ಜಿ ಕೊಟ್ಟಿದ್ದೆ ಅಂತಾರೆ. ಆದರೆ ಅರ್ಜಿ ಕಿಮ್ಮತ್ತೇನು, ಹಣ ಬಿಡುಗಡೆಯಾಗಿದ್ದು ಯಾವಾಗ, ಮಂಜೂರಾಗಿದ್ದು ಯಾವಾಗ?, ಅರ್ಜಿ ಸಲ್ಲಿಸಿದವರಿಗೆ ಏನು ಕಿಮ್ಮತ್ತು ಕೊಡಬೇಕೋ ಕೊಡಿ, ಹಣ ಬಿಡುಗಡೆ ಮಾಡಿ, ಕೆಲಸ ಪ್ರಾರಂಭ ಮಾಡಿದವರಿಗೆ ಏನು ಕಿಮ್ಮತ್ತು
ಕೊಡಬೇಕೋಕೊಡಿ ಎಂದರು. ಇದನ್ನೂ ಓದಿ:ತಮಿಳು ನಿರ್ದೇಶಕನ ಚಿತ್ರದಲ್ಲಿ ಸುದೀಪ್
Related Articles
ನಗರಿಗೆ ಕಪ್ಪು ಚುಕ್ಕೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗಬೇಕು ಎಂದರು. ಸಂವಾದದಲ್ಲಿ ಪತ್ರಕರ್ತರು ಹಾಗೂ ಬಿಜೆಪಿ ಮುಖಂಡರಾದ ಚಂದಗಾಲು ಶಿವಣ್ಣ, ಎಚ್.ಪಿ. ಮಹೇಶ್ ಮತ್ತಿತರರು ಇದ್ದರು.
Advertisement
ಮೇಕೆದಾಟು ಯೋಜನೆಗೆ ಬದ್ಧಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ.ರವಿ, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ.
ಆದರೆ ನೆರೆಯ ರಾಜ್ಯಗಳ ನಡುವೆ ಯಾವುದೇ ರೀತಿಯ ಗಲಾಟೆ ಇಲ್ಲದೆ, ಶಾಂತಿಯುತವಾಗಿ ಇತ್ಯರ್ಥಪಡಿಸಿಕೊಳ್ಳುವ ಅವಶ್ಯಕತೆ ಇದೆ.ಕಾವೇರಿ ನೀರಿನ ಹಂಚಿಕೆಯಾಗಿದ್ದು, ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಸುಪ್ರೀಂಕೋರ್ಟ್ ಸಹ ಮಧ್ಯ ಪ್ರವೇಶಿಸಲು ಅವಕಾಶವಿಲ್ಲ ಎಂದು ಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದರು ಸಂಸ್ಥೆಗಿಂತ ವ್ಯಕ್ತಿ ದೊಡ್ಡವನಲ್ಲ
ಮನ್‌ಮುಲ್‌ನಲ್ಲಿ ಹಾಲಿನ ದರ ಬೇರೆ ಜಿಲ್ಲೆಗಳಿಗಿಂತಕಡಿಮೆ ನೀಡಲಾಗುತ್ತಿದೆ ಎಂಬ ವಿಷಯಕೇಳಿದ್ದೇನೆ. ಸಣ್ಣ ರೈತರು ಹಾಲಿನ ಉತ್ಪಾದನೆ ಮೇಲೆ ಅವಲಂಬಿತರಾಗಿದ್ದಾರೆ. ಜನರ ಹಿತಕಾಪಾಡಬೇಕು. ಅಲ್ಲಿ ಭ್ರಷ್ಟಾಚಾರ, ಅಕ್ರಮಗಳು ನಡೆಯುತ್ತಿರುವುದು ಸರಿಯಲ್ಲ. ಸಂಸ್ಥೆಗಿಂತ ವ್ಯಕ್ತಿ ದೊಡ್ಡವನಲ್ಲ. ರೈತರ ಹಿತಕ್ಕಿಂತ ರಾಜಕಾರಣ ದೊಡ್ಡದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಕೆಆರ್‌ಎಸ್: ತಜ್ಞರ ವರದಿಯೇ ಅಂತಿಮ
ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂಬ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ನಡುವೆ ನಡೆಯುತ್ತಿರುವ ಚರ್ಚೆಗಳಿಗಿಂತ ತಜ್ಞರ ವರದಿ ಆಧಾರದ ಮೇಲೆಯೇ ನಿರ್ಧರಿಸಬೇಕಾಗುತ್ತದೆ. ಜಲಾಶಯದ ಜತೆಗೆ ಭಾವನಾತ್ಮಕ ಸಂಬಂಧವಿದೆ. ಮೈಸೂರು ಮಹಾರಾಜರುಕಟ್ಟಿರುವ ಅಣೆಕಟ್ಟೆಯನ್ನು ಹಾಳಾಗಲು ಬಿಡಬಾರದು. ಇದರಲ್ಲಿ ವ್ಯಕ್ತಿಗತ ಸ್ವಾರ್ಥ ಬಿಡಬೇಕು. ಜತೆಗೆ ನಿರ್ಲಕ್ಷ್ಯ ಮಾಡಬಾರದು ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರು. ಇಂದಿರಾ ಕ್ಯಾಂಟೀನ್ ಹೆಸರು ಬದಲು
ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣ ಕ್ಯಾಂಟೀನ್ ಎಂದು ಬದಲಾಯಿಸುತ್ತೇವೆ.ಕಾಂಗ್ರೆಸ್‌ನವರು ಪಕ್ಷದ ನಾಯಕಿಯ ಹೆಸರು ಇಟ್ಟಿದೆ. ನಾವು ರಾಜಕಾರಣ ಹೊರತುಪಡಿಸಿ ಹೆಸರಿಡಲು ಮುಂದಾಗಿದ್ದೇವೆ. ಅನ್ನಪೂರ್ಣ ಎಂಬ ಹೆಸರು ನಮ್ಮ ಪಕ್ಷದಲ್ಲಿ ಯಾವ ನಾಯಕಿಯರ ಹೆಸರೂ ಇಲ್ಲ ಎಂದು ಸಿ.ಟಿ.ರವಿ ಹೇಳಿದರು. ಕಾಂಗ್ರೆಸ್ ಸರ್ಕಾರ ದೇಶದಲ್ಲಿ 216 ಯೋಜನೆಗಳಿಗೆ ಒಂದೇ ಕುಟುಂಬದ ಹೆಸರಿಟ್ಟಿದೆ. ಹಾಗಾ ದರೆ
ಬೇರೆಯವರ ಕೊಡುಗೆ ಏನು ಇಲ್ಲವೇ? ಎಂದು ಪ್ರಶ್ನಿಸಿದ ಅವರು,ಕಾಂಗ್ರೆಸ್‌ನವರು ತಮ್ಮ ಪಕ್ಷದ ನಾಯಕರ ಹೆಸರಿಟ್ಟು ಅವರಿಲ್ಲದೇ ದೇಶವೇ ಇಲ್ಲವೆಂಬ ಭ್ರಮೆ ಸೃಷ್ಟಿಸಿದ್ದಾರೆ. ಅದಕ್ಕೆ ನಮ್ಮ ವಿರೋಧವಿದೆ ಎಂದರು.