Advertisement

ಗೃಹ ಖರೀದಿದಾರರ ರಕ್ಷಣೆಗೆ ಕಾಯ್ದೆ: ಕೇಂದ್ರ

01:43 AM Oct 07, 2022 | Team Udayavani |

ಹೊಸದಿಲ್ಲಿ: ಅಪಾರ್ಟ್‌ಮೆಂಟ್‌ ಖರೀದಿದಾರರ ಹಿತರಕ್ಷಣೆಗಾಗಿ “ಮಾರಾಟಗಾರರು ಮತ್ತು ಖರೀದಿದಾರರ ನಡುವಿನ ಒಪ್ಪಂದ’ ವ್ಯವಸ್ಥೆ ಜಾರಿಗೊಳಿಸುವುದಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

Advertisement

ರಾಜ್ಯಗಳ ಮಟ್ಟದಲ್ಲಿ ಕೂಡ ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಆ ಒಪ್ಪಂದದಲ್ಲಿ ಇರುವ ಷರತ್ತು­ಗಳನ್ನು ಬದಲಾವಣೆ ಮಾಡಲು ಅವಕಾಶ ಇರು­ವು­ದಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ನ್ಯಾ| ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾ| ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡಿದ್ದಾರೆ,

ಮನೆ ಖರೀದಿದಾರರ ಹಿತರಕ್ಷಣೆಗಾಗಿ 2016ರ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ಅನುಗುಣವಾಗಿ “ಮಾರಾಟ­ಗಾರರು ಮತ್ತು ಖರೀದಿದಾರರ ನಡುವಿನ ಒಪ್ಪಂದ’ ವ್ಯವಸ್ಥೆ ಜಾರಿ ತರಲಾಗುತ್ತದೆ ಎಂದರು. ನ್ಯಾಯಾ­ಲಯ ಅದನ್ನು ಪರಿಶೀಲಿಸಿ, ಒಪ್ಪಿಗೆ ನೀಡಬೇಕು ಎಂದು ಐಶ್ವರ್ಯ ಭಾಟಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next