Advertisement

Central Fund: ಭದ್ರಾ ಮೇಲ್ದಂಡೆ 5,300 ಕೋಟಿ 3 ಕಂತಲ್ಲಿ ಬಿಡುಗಡೆ: ಕೇಂದ್ರ ಸಚಿವ ಸೋಮಣ್ಣ

02:54 AM Oct 03, 2024 | Team Udayavani |

ಚಿತ್ರದುರ್ಗ: ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ ಘೋಷಣೆ ಮಾಡಿರುವ 5,300 ಕೋಟಿ ರೂ. ಅನುದಾನವನ್ನು 2-3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮುಂದಿನ ಒಂದೂವರೆ ತಿಂಗಳಲ್ಲಿ ಮೊದಲ ಕಂತು ಬಿಡುಗಡೆಯಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಶೇ.90ರಷ್ಟು ಮುಕ್ತಾಯವಾಗಿದೆ. 2027ರ ಜನವರಿ ಒಳಗಾಗಿ ಈ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎಂದರು.

ಆತ್ಮಸಾಕ್ಷಿಗಿಂತ ನೈತಿಕತೆ ಮುಖ್ಯ: ಸೋಮಣ್ಣ
ಆತ್ಮಸಾಕ್ಷಿಗಿಂತ ನೈತಿಕತೆ ಮುಖ್ಯ. ಇದನ್ನು ಅರಿತು ಸಿದ್ದರಾಮಯ್ಯ ತತ್‌ಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. ಸಿಎಂ ಸಿದ್ದರಾಮಯ್ಯ ಒಂದು ತಪ್ಪು ಸರಿಪಡಿಸಿಕೊಳ್ಳಲು ಹೋಗಿ ಹತ್ತಾರು ತಪ್ಪುಗಳನ್ನು ಮಾಡುತ್ತಿದ್ದು, ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಕಾನೂನು ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ ಇಂದಿನ ಸಂದರ್ಭದಲ್ಲಿ ಅವರು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ದಯವಿಟ್ಟು ರಾಜೀನಾಮೆ ನೀಡಿ, ಕ್ಲೀನ್‌ ಚಿಟ್‌ ಪಡೆದು ಮತ್ತೆ ಮುಖ್ಯಮಂತ್ರಿಗಳಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next