Advertisement
ಪಟ್ಟಣದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಭಾನಾಪೂರದಿಂದ ಗದ್ದಿನಕೇರಿವರೆಗೆ ರಾಷ್ಟ್ರೀಯ ಹೆದ್ದಾರಿ, ಮುನಿರಬಾದ್-ಮೆಹಬೂಬ್ ನಗರ ರೈಲ್ವೆ, ಗದಗ-ವಾಡಿ ರೈಲ್ವೆ ಯೋಜನೆ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು. ಗದಗ-ವಾಡಿ ರೆೈಲ್ವೆ ಯೋಜನೆಯನ್ನು ಅಂದಿನ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ನಾಮಕಾವಸ್ಥೆ ಎಂಬಂತೆ ಅದಕ್ಕೆ ಯಾವುದೇ ಅನುದಾನ ನೀಡದೇ ಯೋಜನೆಗೆ ಚಾಲನೆ ನೀಡಿದ್ದರು. ಅದು ಸರ್ವೇ ಸಹ ಆಗಿರಲಿಲ್ಲ. ತದನಂತರ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೆೈಲ್ವೆ ಯೋಜನೆ ಹಣ ನೀಡಿ ಸರ್ವೇ ಕಾರ್ಯ ಮಾಡಿಸಿ ಇದೀಗ ಭಾನಾಪೂರದಿಂದ ಕಾಮಗಾರಿ ಆರಂಭಿಸಿದೆ. ಸಂಸದ ಸಂಗಣ್ಣ ಕರಡಿ ಅವರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿದ್ದಾರೆ.
Related Articles
Advertisement
ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಆರ್.ಕೆ. ಮಠದ ಮಾತನಾಡಿ, ಲೋಕಪಯೋಗಿ ಇಲಾಖೆಯ ಒಂದು ಕೋಟಿ ರೂ. ಅನುದಾನದಲ್ಲಿ ನೂತನ ಉಪ ವಿಭಾಗ ಕಚೇರಿ ಆರಂಭವಾಗಿದೆ. ಪ್ರಯೋಗಾಲಯ, ಗುಣಮಟ್ಟ ಪರೀಕ್ಷೆ ಕೊಠಡಿ ಸೇರಿದಂತೆ ಎಲ್ಲವೂ ಗುಣಮಟ್ಟದಿಂದ ಕೂಡಿವೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಹಾಲಪ್ಪ ಆಚಾರ್ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ತಹಶೀಲ್ದಾರ್ ರಮೇಶ ಅಳವಂಡಿಕರ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಲಕ್ಷ್ಮಿ ಗೌಡ್ರ, ಜಿಪಂ ಸದಸ್ಯರಾದ ಗಂಗಮ್ಮ ಗುಳಗಣ್ಣನವರ, ಗಿರಿಜಾ ಸಂಗಟಿ, ಹೊಳಿಯಮ್ಮ ಪಾಟೀಲ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಸದಸ್ಯೆ ಕವಿತಾ ಉಳ್ಳಾಗಡ್ಡಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ, ಶಿವಶಂಕರರಾವ್ ದೇಸಾಯಿ, ಈರಪ್ಪ ಕುಡಗುಂಟಿ, ಶಿವನಗೌಡ ಬನ್ನಪ್ಪಗೌಡ್ರ, ಸಿದ್ದರಾಮೇಶ ಬೆಲೇರಿ, ಕೊಟ್ರಪ್ಪ ತೋಟದ, ಎಸ್.ಎನ್. ಶ್ಯಾಗೋಟಿ, ವಕೀಲ ಶಂಕರಗೌಡ ಗೆದಗೇರಿ, ಎಚ್.ಎಚ್. ಕುರಿ, ಶಂಕರಗೌಡ ಟೀಕಲ್, ಲೋಕಪಯೋಗಿ ಇಲಾಖೆ ಎಇಇ ಹೇಮಂತ ರಾಜ್, ಗಿರೀಶ, ಶರಣ ಬಸವರಾಜ, ಮಹಾಂತೇಶ, ಗುತ್ತಿಗೆದಾರ ಶಿವಪ್ರಸಾದ, ಸುರೇಶ ಹೊಸಳ್ಳಿ, ನೀಲನಗೌಡ ತಳುಗೇರಿ ಇತರರು ಇದ್ದರು.