ವಿಜಯಪುರ : ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತಕುಮಾರ ಸಾಹು ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಅ.6 ರಂದು ವಿಜಯಪುರ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಲಿದೆ.
ಬಬಲೇಶ್ವರ ಹಾಗೂ ಇಂಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದೆ.ಕೇಂದ್ರ ಬರ ಅದ್ಯಯನ ತಂಡ ಅ.6 ರಂದು ಮಧ್ಯಾಹ್ನ 3 ಗಂಟೆಗೆ ಅರ್ಜುಣಗಿಗೆ ಆಗಮಿಸಿ ತೊಗರಿ ಹಾಗೂ ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಲಿದೆ. ಮ. 3-15ಕ್ಕೆ ಅರ್ಜುಣಗಿ ಗ್ರಾಮದಿಂದ ಹೊರಟು ಮ.3-30ಕ್ಕೆ ಯಕ್ಕುಂಡಿ ಗ್ರಾಮಕ್ಕೆ ಆಗಮಿಸಿ, ಕಬ್ಬು ಬೆಳೆ ಹಾಗೂ ಯಕ್ಕುಂಡಿ ಕೆರೆ ವೀಕ್ಷಣೆ ಮಾಡಲಿದ್ದಾರೆ.
ಮಧ್ಯಾಹ್ನ 3-45ಕ್ಕೆ ಯಕ್ಕುಂಡಿಯಿಂದ ಹೊರಟು ಮಧ್ಯಾಹ್ನ 4 ಗಂಟೆಗೆ ಬಬಲೇಶ್ವರಕ್ಕೆ ಆಗಮಿಸುವ ಬರ ಅಧ್ಯಯನ ತಂಡದ ಅಧಿಕಾರಿಗಳು, ತೊಗರಿ ಬೆಳೆಗಳ ವೀಕ್ಷಣೆ ನಡೆಸಲಿದ್ದಾರೆ. ಸಂಜೆ 4-05ಕ್ಕೆ ಬಬಲೇಶ್ವರದಿಂದ ಹೊರಟು, 4-15ಕ್ಕೆ ಸಾರವಾಡ ಗ್ರಾಮದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳ ವೀಕ್ಷಣೆ ಮಾಡಲಿದ್ದಾರೆ.
4-30ಕ್ಕೆ ಸಾರವಾಡದಿಂದ ಹೊರಟು 4-40ಕ್ಕೆ ವಿಜಯಪುರಕ್ಕೆ ಆಗಮಿಸಲಿದೆ. ಸಂಜೆ 5 ಗಂಟೆಗೆ ವಿಜಯಪುರದಿಂದ ಹೊರಟು 5-30ಕ್ಕೆ ಹೊರ್ತಿ ಗ್ರಾಮದಲ್ಲಿ ಲಿಂಬೆ ಬೆಳೆ, ಸಜ್ಜೆ ಹಾಗೂ ಮೆಕ್ಕೆ ಜೋಳ ಬೆಳೆಗಳ ವೀಕ್ಷಣೆ ನಡೆಸಲಿದೆ. ಸಂಜೆ 5-45ಕ್ಕೆ ಹೊರ್ತಿಯಿಂದ ಹೊರಟು, 5-50ಕ್ಕೆ ಸಾವಳಸಂಗ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕೈಗೊಂಡಿರುವ ಅಮೃತ ಸರೋವರ ಅರಣ್ಯ ಕಾಮಗಾರಿಗಳ ವೀಕ್ಷಣೆ ಮಾಡಲಿದ್ದಾರೆ.
ಸಂಜೆ 6 ಗಂಟೆಗೆ ಸಾವಳಸಂಗದಿಂದ ಹೊರಟು 6-10ಕ್ಕೆ ಕಪನಿಂಬರಗಿ ಗ್ರಾಮದಲ್ಲಿ ಕಪನಿಂಬರಗಿ ಕೆರೆ ವೀಕ್ಣಿಸಿ, ಸಂಜೆ 6-15ಕ್ಕೆ ಕಪನಿಂಬರಗಿಯಿಂದ ಹೊರಟು ವಿಜಯಪುರ ನಗರಕ್ಕೆ ಆಗಮಿಸಿ, ವಾಸ್ತವ್ಯ ಮಾಡಲಿದೆ ಎಂದು ಜಿಲ್ಲಾಧಿಕಾರಿ ಭೂಬಾಲನ್ ತಿಳಿಸಿದ್ದಾರೆ.