Advertisement

ಮೀನುಗಾರರ ಪತ್ತೆಗೆ ಕೇಂದ್ರ ಅಸಹಕಾರ

11:32 PM Apr 12, 2019 | Lakshmi GovindaRaju |

ವಿಜಯಪುರ: ಅರಬ್ಬಿ ಸಮುದ್ರದ ಮಹಾರಾಷ್ಟ್ರದ ಕರಾವಳಿ ಭಾಗದಿಂದ ನಾಪತ್ತೆಯಾಗಿರುವ 7 ಮೀನುಗಾರರ ಇರುವಿಕೆ ಕುರಿತು ಯಾವ ಕುರುಹೂ ದೊರೆತಿಲ್ಲ. ನಾಪತ್ತೆಯಾದವರ ಪತ್ತೆಗೆ ಕರ್ನಾಟಕ ಸರ್ಕಾರ ಮಾಡಿಕೊಂಡ ಮನವಿಗೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಪತ್ತೆಯಾದ 7 ಮೀನುಗಾರರಲ್ಲಿ ಐವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕ್ಷೇತ್ರದವರೇ ಇದ್ದಾರೆ. ಇಷ್ಟಾದರೂ ಮೀನುಗಾರರ ಪತ್ತೆಗೆ ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ಹೆಗಡೆ ಸೂಕ್ತ ಸ್ಪಂದನೆ ನೀಡಲಿಲ್ಲ.

ಮೀನುಗಾರರು ನಾಪತ್ತೆಯಾದ ಕ್ಷಣದಿಂದಲೇ ರಾಜ್ಯ ಸರ್ಕಾರ ಮೀನುಗಾರರ ಶೋಧಕ್ಕೆ ಇಳಿದಿದೆ. ಮಹಾರಾಷ್ಟ್ರ ವ್ಯಾಪ್ತಿಯ ಸಮುದ್ರದಲ್ಲಿ ಕಾಣೆಯಾಗಿರುವ ಕಾರಣ ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ತಮ್ಮದೇ ಸರ್ಕಾರ ಇದ್ದರೂ ನಮ್ಮ ಲಿಖೀತ ಮನವಿಗೆ ಸ್ಪಂದಿಸಲಿಲ್ಲ. ಮಹಾರಾಷ್ಟ್ರ ಮಾತ್ರವಲ್ಲ ಗೋವಾ ಸರ್ಕಾರಕ್ಕೂ ಪತ್ರ ಬರೆದರೂ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next