Advertisement

ರಸ್ತೆ ಬಂದ್‌ ತೆರವಿಗೆ ಕೇಂದ್ರ ನಿರ್ದೇಶ ನೀಡಲಿ: ಸು. ಕೋ.ಗೆ ಕೇರಳ ಅಫಿದವಿತ್‌

12:39 AM Apr 07, 2020 | Team Udayavani |

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಮತ್ತು ಗಡಿಗಳನ್ನು ಕರ್ನಾಟಕ ಸರಕಾರ ಬಂದ್‌ ಮಾಡಿರುವುದು ನಾಗರಿಕರ ಮೂಲ ಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇರಳ ಸರಕಾರ ತಿಳಿಸಿದೆ.

Advertisement

ಕೋವಿಡ್ 19 ಸೋಂಕು ತಡೆಗೆ ರಸ್ತೆಗಳನ್ನು ಬಂದ್‌ ಮಾಡಿರು ವುದರಿಂದ ಕೇರಳಕ್ಕೆ ಅಗತ್ಯ ವಸ್ತುಗಳ ಸಾಗಣೆ ವಾಹನ ಮತ್ತು ಆ್ಯಂಬುಲೆನ್ಸ್‌ ಗೆ ಅಡ್ಡಿಯಾಗಿದೆ. ರೋಗಿ ಗಳಿಗೆ ಚಿಕಿತ್ಸೆ ಸಿಗದಂತಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ವಿಚಾರಣೆ ಅವಧಿಯಲ್ಲೇ ಒಬ್ಬರು ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯ ಜನರು ಚಿಕಿತ್ಸೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿದ್ದಾರೆ. ಗಡಿ ಮೂಲಕವೇ ಕೇರಳಕ್ಕೆ ಅಗತ್ಯ ವಸ್ತುಗಳು ಪೂರೈಕೆ ಆಗಬೇಕಿದೆ. ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ರಸ್ತೆಗಳನ್ನು ಬಂದ್‌ ಮಾಡಿರುವುದನ್ನು ತೆರವುಗೊಳಿಸಲು ಕರ್ನಾಟಕ ಸರಕಾರಕ್ಕೆ ಕೇಂದ್ರ ನಿರ್ದೇಶನ ನೀಡಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ಕೇರಳ ಅಫಿದವಿತ್‌ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮಂಗಳ ವಾರ(ಎ.7)ಕ್ಕೆ ಮುಂದೂಡಿದೆ.

ಕಳೆದ ವಾರ ಕೇರಳ ಹೈಕೋರ್ಟ್‌, ಗಡಿ ಬಂದ್‌ ಮಾಡಿ ರುವುದನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರಕಾರ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಎ. 3ರಂದು ಸುಪ್ರೀಂ ಕೋರ್ಟ್‌, ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಆರೋಗ್ಯ ಸಚಿ ವಾಲಯದ ಕಾಯದರ್ಶಿ ಜತೆ ಮಾತುಕತೆ ನಡೆಸಿ, ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವಂತೆ ಸಲಹೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next