ನವದೆಹಲಿ: ಹಡಗುಗಳನ್ನು ಖರೀದಿಸುವ ಸಂಬಂಧ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಆಹ್ವಾನಿಸಿದೆ. ಇದು ಒಟ್ಟು 15 ಸಾವಿರ ಕೋಟಿ ರೂ. ಖರೀದಿ ಪ್ರಕ್ರಿಯೆಯಾಗಿದ್ದು, ಹಡಗುಗಳು ಹಾಗೂ ನೌಕಾಪಡೆಗೆ ಸಂಬಂಧಿಸಿದ ಇತರ ಪರಿಕರಗಳನ್ನು ಇದರ ಅಡಿಯಲ್ಲಿ ಖರೀದಿಸಲಾಗುತ್ತಿದೆ.
ಮುಂದಿನ ತಲೆಮಾರಿನ ಆರು ಕ್ಷಿಪಣಿ ಹಡಗುಗಳು, ಎಂಟು ಪಹರೆ ಹಡಗುಗಳು, 12 ಏರ್ ಕುಷನ್ ವೆಹಿಕಲ್ಗಳು ಹಾಗೂ ಎಂಟು ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದ್ದು, ಈ ಪ್ರಸ್ತಾವನೆಗಳನ್ನು ಆಧರಿಸಿ ಟೆಂಡರ್ ಕರೆಯಲಾಗುತ್ತದೆ. ಶಿಪ್‌ಯಾರ್ಡ್‌ಗಳು ಅರ್ಜಿ ಸಲ್ಲಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಸ್ತ್ರಾಸ್ತ್ರಗಳ ಖರೀದಿಗೆ ಪ್ರಸ್ತಾವನೆ ಆಗ್ರಹಿಸಲಾಗುತ್ತದೆ.
Advertisement