Advertisement
ಏಮ್ಸ್‌ನ ವಿಧಿವಿಜ್ಞಾನ ತಂಡವು ಸದ್ಯದಲ್ಲೇ ಸುಶಾಂತ್‌ರ ಬಾಂದ್ರಾದ ನಿವಾಸಕ್ಕೆ ಭೇಟಿ ನೀಡಲಿದೆ. ಜತೆಗೆ, ಪ್ರಕರಣ ಸಂಬಂಧ ಹೇಳಿಕೆಗಳನ್ನು ಪಡೆಯಲು 5-6 ತಂಡವನ್ನು ಸಿಬಿಐ ರಚಿಸಲಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ನ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ಗುರುವಾರ ಕೇಂದ್ರ ತನಿಖಾ ಸಂಸ್ಥೆಯ ತಂಡ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಿಗಾಗಿ ಮುಂಬಯಿ ಪೊಲೀಸರನ್ನು ಸಂಪ ರ್ಕಿ ಸಿದೆ. ಅಲ್ಲದೆ, ಸುಶಾಂತ್ ಕುಟುಂಬ ಸದಸ್ಯ ರೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡಿದ್ದ ಡಿಸಿಪಿಯನ್ನು ಹಾಗೂ ಸುಶಾಂತ್ ಸಹೋದರಿ ಯನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಭೂಗತ ಜಗತ್ತಿನ ಅಪರಾಧಿಗಳಿಗೂ ಸುಶಾಂತ್ ಸಾವಿಗೂ ನಂಟು ಇರುವ ಸಾಧ್ಯತೆಯಿದೆ ಎಂದು ಮಾಜಿ ರಾ ಅಧಿಕಾರಿ ಎನ್.ಕೆ. ಸೂದ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಹಣಕಾಸಿನ ತೊಂದರೆಗೆ ಸಿಲುಕಿದ್ದರು ಎಂಬುವುದು ಯಾರನ್ನೋ ರಕ್ಷಿಸಲು ಮಾಡುತ್ತಿರುವ ಯತ್ನ ಎಂದು ನನಗನಿಸುತ್ತಿದೆ. ಈ ಸಾವಿನಲ್ಲಿ ಸುಶಾಂತ್ ಮನೆಯಲ್ಲಿ ಕೆಲಸಕ್ಕಿದ್ದವರ ಕೈವಾಡವೂ ಇರಬಹುದು. ಅವರಿಗೆ ಹಣದಾಸೆ ತೋರಿಸಿ ಅಂಡರ್‌ವರ್ಲ್ಡ್ ಕ್ರಿಮಿನಲ್‌ಗಳು ಈ ಕೃತ್ಯ ಮಾಡಿಸಿರಬಹುದು ಎಂದು ಸೂದ್ ಹೇಳಿದ್ದಾರೆ.