Advertisement
2021-22 ಕೇಂದ್ರ ಆಯವ್ಯಯ ಮತ್ತು 15ನೇ ಹಣಕಾಸು ಆಯೋಗದ ವರದಿಯು ಒಟ್ಟಾಗಿ ಭಾರತದ ನಗರಗಳ ಹೊಸ ಯುಗಕ್ಕೆ ನಾಂದಿ ಹಾಡಿವೆ. ಸಾಂಕ್ರಾಮಿಕ ವರ್ಷದಲ್ಲೂ ಅಭೂತಪೂರ್ವ ಬಜೆಟ್ ನಲ್ಲಿ ಸುಮಾರು 7 ಲಕ್ಷ ಕೋಟಿ ರೂ.ಗಳ ಅನುದಾನವು, ಐದು ವರ್ಷಗಳಲ್ಲಿ ನಮ್ಮ ನಗರಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಎನ್‌ಡಿಎ ಸರಕಾರದ ಬದ್ಧತೆಯನ್ನು ಪುನರುಚ್ಚರಿಸಿದೆ. ಇದು ಸುಗಮ ಜೀವನ ಮತ್ತು ಸುಲಲಿತ ವ್ಯವಹಾರವನ್ನು ಒಳಗೊಂಡಿದೆ. 7 ಲಕ್ಷ ಕೋಟಿ ರೂ.ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಒಳಗೊಂಡಂತೆ ನೀರು ಮತ್ತು ನೈರ್ಮಲ್ಯಕ್ಕಾಗಿ 5 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಮತ್ತು ಬಾಕಿ ಮೊತ್ತದಲ್ಲಿ ಮೆಟೊ›à ರೈಲಿಗೆ 88,000 ಕೋಟಿ ರೂ., ಆರೋಗ್ಯ ಸೇವೆಗಳಿಗೆ 26,000 ಕೋಟಿ ರೂ., ಬಸ್ ಸಾರಿಗೆಗೆ 18,000 ಕೋಟಿ, ಶುದ್ಧ ಗಾಳಿಗೆ 15,000 ಕೋಟಿ ಮತ್ತು ಹೊಸ ನಗರಗಳು ಹಾಗೂ ಸ್ಥಳೀಯ ಸಂಸ್ಥೆಗಳ ಸೇವೆಗಳಿಗಾಗಿ 8,450 ಕೋಟಿ ರೂ.ಒದಗಿಸಲಾಗಿದೆ.
Related Articles
Advertisement
ನಗರ ಆಡಳಿತಕ್ಕೆ ಬಲವಾದ ಸಾಂಸ್ಥಿಕ ವ್ಯವಸ್ಥೆಗಳು ಪ್ರಮುಖವಾಗಿವೆ. ಪ್ರಮುಖ ಕಾರ್ಯಕ್ರಮಗಳ ಯೋಜನಾ ಮಧ್ಯಸ್ಥಿಕೆಗಳ ಜತೆಗೆ ನಮ್ಮ ನಗರಗಳ ಸ್ಥಳೀಯ ಆಡಳಿತಗಳನ್ನು ಬಲಪಡಿಸಲು ಒಂದು ಏಕೀಕೃತ, ಸಮಗ್ರ ಪ್ರಯತ್ನವನ್ನು ಮಾಡಲಾಗಿದೆ. ಈ ಎಲ್ಲ ಉಪಕ್ರಮಗಳು ಸ್ಥಳೀಯ ಆಡಳಿತಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಆಸ್ತಿ ತೆರಿಗೆ ಸುಧಾರಣೆ ಕ್ರಮಗಳ ಮೂಲಕ ಒತ್ತು ನೀಡಿವೆ. ವಾಸ್ತವವಾಗಿ ಒಂಬತ್ತು ನಗರ ಸ್ಥಳೀಯ ಸಂಸ್ಥೆಗಳು ಬಾಂಡ್‌ಗಳ ಮೂಲಕ ಯಶಸ್ವಿಯಾಗಿ 3,690 ಕೋಟಿ ರೂ. ಹಣವನ್ನು ಸಂಗ್ರಹಿಸಿವೆ, ಇದು ವ್ಯವಸ್ಥೆಯೊಳಗೆ ಕ್ರಮೇಣ ವಾಗಿ ವೃತ್ತಿಪರತೆಯನ್ನು ಬೆಳೆಸಿಕೊಳ್ಳುವುದರ ಸಂಕೇತವಾಗಿದೆ ಮತ್ತು ಅವುಗಳ ಕಾರ್ಯವನ್ನು ಸುಸ್ಥಿರ ಮತ್ತು ಪಾರದರ್ಶಕವಾಗಿಸುವ ವಿಶ್ವಾಸವೂ ಆಗಿದೆ. ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸಂಪನ್ಮೂಲಗಳ ವೃದ್ಧಿಗೆ ಈ ನಂಬಿಕೆಯ ಹಾದಿ ತುಳಿದಿವೆ.
ಬೃಹತ್ ನಗರಗಳು ಮಧ್ಯಮಾವಧಿಯಲ್ಲಿ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಮತ್ತು ಉತ್ಪಾದಕತೆಯನ್ನು ಮುನ್ನಡೆಸುತ್ತವೆ. ಮಿಲಿಯನ್-ಪ್ಲಸ್ ಸಂಗ್ರಹಕ್ಕಾಗಿ 15ನೇ ಹಣಕಾಸು ಆಯೋಗದ 38,000 ಕೋಟಿ ರೂಪಾಯಿಗಳ ಮಿಲಿಯನ್ ಪ್ಲಸ್ ಚಾಲೆಂಜ್ ಫಂಡ್ ಸ್ವಾಗತಾರ್ಹ ಕ್ರಮವಾಗಿದೆ. ಇದು ಮಹಾನಗರಗಳಲ್ಲಿ ವಿವಿಧ ನಾಗರಿಕ ಸಂಸ್ಥೆಗಳ ನಡುವೆ ಅಗತ್ಯವಾದ ಏಕೀಕರಣ ಮತ್ತು ಸಮನ್ವಯವನ್ನು ಪ್ರೋತ್ಸಾಹಿಸುತ್ತದೆ. ಹೊಸ ನಗರಗಳಿಗೆ 8,000 ಕೋಟಿ ರೂ.ಗಳ ಮೂಲ ನಿಧಿಯು ಯೋಜಿತ ನಗರೀಕರಣದಲ್ಲಿ ರಾಜ್ಯಗಳಿಗೆ ಅನುಶೋಧನೆಗೆ ಅವಕಾಶ ಕಲ್ಪಿಸುತ್ತದೆ. ಸ್ಥಳೀಯ ಸಂಸ್ಥೆಗಳ ಸೇವೆಗಳ ಹಂಚಿಕೆಯ ಪರಿಕಲ್ಪನೆಯು ನಗರಗಳ ಸಾಮರ್ಥ್ಯವನ್ನು ಸಾಮೂಹಿಕವಾಗಿ ನಿರ್ಮಿಸಲು ಉತ್ತೇಜನ ನೀಡುತ್ತದೆ.
ಭವಿಷ್ಯದ ನಗರಗಳು ಎದುರಿಸುವ ಸಮಸ್ಯೆಗಳನ್ನು ನಿಭಾ ಯಿಸಲು ಸ್ಥಳೀಯ ಆಡಳಿತವು ಸೂಕ್ತ ಪರಿಣತಿಯನ್ನು ಹೊಂದಿ ರಬೇಕು. ಇಂದು ನಗರ ಸ್ಥಳೀಯ ಸಂಸ್ಥೆಗಳು ಅಸಮರ್ಪಕ ಕುಶಲ ಕಾರ್ಯಪಡೆಯ ಸವಾಲು ಎದುರಿಸುತ್ತಿವೆ. ಈ ಸವಾಲುಗಳನ್ನು ಗುರುತಿಸಿದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಶಿಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ ಅರ್ಬನ್ ಲರ್ನಿಂಗ್ ಇಂಟರ್ನ್ಶಿಪ್ ಪ್ರೋಗ್ರಾಂ’ (ಖಖೀಔಐಕ) ಪ್ರಾರಂಭಿಸಿದೆ. ಹೊಸ ಪದವೀಧರರು, ಡಿಪ್ಲೊಮಾ ಹೊಂದಿರುವವರು ಅಥವಾ ಸ್ನಾತಕೋತ್ತರ ಪದವೀಧರರಿಗೆ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸ್ಮಾರ್ಟ್ ನಗರಗಳಲ್ಲಿ ನಗರ ಆಡಳಿತ ಕ್ಷೇತ್ರದಲ್ಲಿ ಇಂಟರ್ನ್ಶಿಪ್ ಅವಕಾಶಗಳನ್ನು ನೀಡಲಾಗುತ್ತದೆ. ಅಮೂಲ್ಯವಾದ ಕ್ಷೇತ್ರ ಅನುಭವವನ್ನು ಪಡೆಯುವ, ಕಲಿಯಲು ತಮ್ಮನ್ನು ಸಾಬೀತುಪಡಿಸಲು ಉತ್ಸುಕರಾಗಿರುವ ಚೈತನ್ಯಯುಕ್ತ ಯುವ ವಿದ್ಯಾರ್ಥಿಗಳಿಗೆ ಮತ್ತು ಹೊಸ ಆಲೋಚನೆಗಳನ್ನು ಪಡೆಯುವ ಯುಎಲ್‌ಬಿ ಗಳಿಗೆ ಇದು ಪರಸ್ಪರ ಗೆಲುವಿನ ಸನ್ನಿವೇಶವಾಗಿದೆ.
21ನೇ ಶತಮಾನದ ಸವಾಲುಗಳಿಗೆ ನಾಗರಿಕ ಸಮಾಜ, ಉದ್ಯಮ, ಶೈಕ್ಷಣಿಕ ಕ್ಷೇತ್ರ ಮತ್ತು ಎಲ್ಲ ಮಟ್ಟದ ಸರಕಾರಗಳ ನಡುವೆ ಸಹಭಾಗಿತ್ವ ಅಗತ್ಯವಾಗಿದೆ ಎಂಬುದನ್ನು ಕೋವಿಡ್-19 ಸಾಬೀತುಪಡಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಸ್ಮಾರ್ಟ್ ನಗರಗಳ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು (ಐಸಿಸಿಸಿಗಳು) ವಹಿಸಿದ ಪ್ರಮುಖ ಪಾತ್ರ ಈಗ ಎಲ್ಲರಿಗೂ ತಿಳಿದಿದೆ. ಈ ಐಸಿಸಿಸಿಗಳನ್ನು ಕೋವಿಡ್ ಸಮರ ಕೊಠಡಿಗಳಾಗಿ ಪರಿವರ್ತಿಸಲಾಯಿತು ಮತ್ತು ನಗರ ಆಡಳಿತಕ್ಕೆ ನಿರ್ಣಾಯಕವಾದ ನೈಜ ಸಮಯದ ಮಾಹಿತಿಯನ್ನು ಒದಗಿಸಲಾಯಿತು.
ರಾಜಕೀಯವಾಗಿ ನಿರ್ಣಾಯಕವಾದ ಪಾತ್ರ ವಹಿಸಿರುವ ಯುವ ಭಾರತೀಯರು ತಾಳ್ಮೆ ಹೊಂದಿದ್ದಾರೆ ಮತ್ತು ದೇಶವು ಈಗ ಪ್ರಗತಿಯತ್ತ ಮುನ್ನುಗ್ಗಬೇಕು ಎಂದು ಅವರು ಬಯಸಿದ್ದಾರೆ! ನಾವು ಅವರನ್ನು ನಿರಾಶೆಗೊಳಿಸಲು ಸಾಧ್ಯ ವಿಲ್ಲ ಮತ್ತು ನಾವು ಹಾಗೆ ಮಾಡುವುದೂ ಇಲ್ಲ!
ಹರ್‌ದೀಪ್ ಎಸ್ ಪುರಿ,
ಕೇಂದ್ರ ವಸತಿ ಮತ್ತು ನಗರ ವ್ಯವಹಾರ,
ನಾಗರಿಕ ವಿಮಾನ ಯಾನ, ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರು