Advertisement

ಬಜೆಟ್‌ ವೇಳೆ ಸರಕಾರಕ್ಕೆ ಹಣಕಾಸಿನ ಕೊರತೆ?

01:28 AM Jan 15, 2021 | Team Udayavani |

ಹೊಸದಿಲ್ಲಿ: ಈ ಬಾರಿಯದ್ದು “ಹಿಂದೆಂದೂ ಕಂಡರಿ ಯದಂತಹ ಬಜೆಟ್‌’ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಈಗ ಕೋವಿಡ್ ಪೀಡಿತ ಆರ್ಥಿಕತೆಗೆ ಹೆಚ್ಚುವರಿ ಆದಾಯ ತಂದುಕೊಡುವಂಥ ವಿಶ್ವಾಸಾರ್ಹ ಮೂಲವನ್ನು ಕಂಡುಕೊಳ್ಳುವುದೇ ದೊಡ್ಡ ಸವಾಲಾಗಿದೆ.

Advertisement

ಸರಕಾರದ ಸಾಲವು ಈಗಾಗಲೇ ಮಿತಿಯನ್ನು ಮೀರಿದೆ, ಆದಾಯವು ಕುಂಠಿತವಾಗಿದೆ, ವಿತ್ತೀಯ ಕೊರತೆಯು ಅಗಾಧವಾಗಿ ಬೆಳೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಸಂಪನ್ಮೂಲಗಳನ್ನು ಪತ್ತೆಮಾಡುವುದೇ ಕಷ್ಟದ ಕೆಲಸ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗ ಸ್ವಲ್ಪಮಟ್ಟಿಗೆ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿರುವ ಕಾರಣ ತೆರಿಗೆ ಆದಾಯ ಹೆಚ್ಚಾಗಿ ಸರಕಾರಕ್ಕೆ ಸ್ವಲ್ಪಮಟ್ಟಿಗೆ ರಿಲೀಫ್ ನೀಡಬಹುದು. ಆದರೂ, ಪ್ರಸಕ್ತ ವರ್ಷದಲ್ಲಿ ಸರಕಾರವು ತನ್ನ ಅಧೀನದಲ್ಲಿರುವ ಸಂಸ್ಥೆಗಳ ಮಾರಾಟ ಅಥವಾ ಬಂಡವಾಳ ಹಿಂತೆಗೆತದಿಂದ 2.1 ಲಕ್ಷಕೋಟಿ ರೂ. ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಆದರೆ ಸಂಗ್ರಹವಾದದ್ದು ಕೇವಲ 13,800 ಕೋಟಿ ರೂ. ಮಾತ್ರ. ಪ್ರಸಕ್ತ ವರ್ಷ ಸರಕಾರಕ್ಕೆ 7 ಲಕ್ಷಕೋಟಿ ರೂ.ಗಳ ಆದಾಯ ಕೊರತೆಯೂ ಎದುರಾಗಲಿದೆ. ಈ ಎಲ್ಲ ಸ್ಥಿತಿಗತಿಗಳನ್ನು ನೋಡಿದರೆ, ಹಣಕಾಸಿನ ಕೊರತೆ ಎದುರಾಗುವುದು ಬಹುತೇಕ ಖಚಿತ ಎನ್ನುತ್ತಾರೆ ತಜ್ಞರು. ಅಲ್ಲದೆ, ಈಗ “ಜನರು ಹೆಚ್ಚು ಹೆಚ್ಚು ಖರ್ಚು ಮಾಡುವಂತೆ ಮಾಡುವುದು’ ಬಿಟ್ಟರೆ ಪರ್ಯಾಯ ಮಾರ್ಗವೇ ಉಳಿದಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next