Advertisement

Bengaluru ಪ್ರವಾಹ ನಿರ್ವಹಣೆಗೆ ಕೇಂದ್ರ ನೆರವು : ಶಾ ನೇತೃತ್ವದಲ್ಲಿ ಸಭೆ ತೀರ್ಮಾನ

12:58 AM Jul 26, 2024 | Team Udayavani |

ಹೊಸದಿಲ್ಲಿ: ದೇಶದೆಲ್ಲೆಡೆ ಉಂಟಾಗುತ್ತಿ ರುವ ಪ್ರಾಕೃತಿಕ ವಿಪತ್ತುಗಳನ್ನು ಸಮರ್ಥ ವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಹಲವಾರು ರಾಜ್ಯಗಳಲ್ಲಿ ವಿಪತ್ತು ನಿರ್ವಹಣ ಯೋಜನೆಗಳನ್ನು ರೂಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ನಗರ ಪ್ರವಾಹವನ್ನು ನಿರ್ವಹಿಸಲು 2514.36 ಕೋ.ರೂ. ವೆಚ್ಚದಲ್ಲಿ ಮುಂಬಯಿ, ಕೋಲ್ಕತಾ, ಬೆಂಗಳೂರು, ಹೈದರಾ ಬಾದ್‌, ಅಹ್ಮದಾಬಾದ್‌ ಹಾಗೂ ಪುಣೆ ಸೇರಿ 6 ಯೋಜನೆಗಳಿಗೆ ಸಮಿತಿಯು ಅನುಮೋದಿಸಿದೆ.

Advertisement

ಅಗ್ನಿಶಾಮಕ ನಿರ್ವ ಹಣೆ ಹಾಗೂ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಅಸ್ಸಾಂ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ 810.64 ಕೋ.ರೂ. ವೆಚ್ಚದಲ್ಲಿ 3 ಯೋಜನೆಗಳಿಗೆ ಅನುಮೋದಿಸಲಾಗಿದೆ. ಜತೆಗೆ ಅಪಾಯ ನಿರ್ವಹಣೆಗೆ 150 ಕೋಟಿ ರೂ. ವೆಚ್ಚದ ಯೋಜನೆ ಹಾಗೂ ಯವ ಸ್ವಯಂಸೇವಕರ ತರಬೇತಿಗಾಗಿ 470 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ದೊರೆತಿದೆ. ಭಾರತವನ್ನು ವಿಪತ್ತು ಸ್ಥಿತಿಸ್ಥಾಪಕಗೊಳಿಸುವ ಪ್ರಧಾನಿಯ ದೂರದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಅಮಿತ್‌ ಶಾ ಅವರ ಸಲಹೆಯ ಮೇರೆಗೆ ಇವನ್ನು ರೂಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next