ಹೊಸದಿಲ್ಲಿ: ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ರಷ್ಯಾದ ಯುದ್ಧ ವಿಮಾನಗಳು ಉಕ್ರೇನ್ ನ ಹಲವೆಡೆ ವೈಮಾನಿಕ ದಾಳಿ ನಡೆಸುತ್ತಿದೆ. ಈ ಆತಂಕದ ಪರಿಸ್ಥಿತಿಯಲ್ಲಿ ಹಲವಾರು ಭಾರತೀಯರು ಇನ್ನೂ ಉಕ್ರೇನ್ ನಲ್ಲಿ ಸಿಲುಕಿದ್ದಾರೆ.
ಉಕ್ರೇನ್ ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಪ್ರಮುಖ ಸೂಚನೆ ನೀಡಿದೆ. ಈ ಕುರಿತು ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರ ವಿ.ಮುರಳೀಧರನ್ ಪೋಸ್ಟ್ ಮಾಡಿದ್ದಾರೆ.
ಉಕ್ರೇನ್ ದೇಶದಲ್ಲಿ ಸದ್ಯದ ಪರಿಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ದಯವಿಟ್ಟು ಶಾಂತಿ ಕಾಪಾಡಿ. ನೀವು ಎಲ್ಲಿದ್ದೀರೋ ಅಲ್ಲಿ ಸುರಕ್ಷಿತವಾಗಿರಿ.
ಇದನ್ನೂ ಓದಿ:ಉಕ್ರೇನ್ ಮೇಲ್ಯಾಕೆ ರಷ್ಯಾ ಕಣ್ಣು? ವಿವಾದದ ಮೂಲವೇನು? NATO ಕಂಡರೆ ಪುಟಿನ್ ಗೆ ಯಾಕೆ ಉರಿ?
ಯಾರೆಲ್ಲಾ ರಾಜಧಾನಿ ಕಿವ್ ಗೆ ಪ್ರಯಾಣ ಮಾಡುತ್ತಿದ್ದೀರೋ ಅವರೆಲ್ಲರೂ ನಿಮ್ಮ ನಗರಗಳಿಗೆ ತಾತ್ಕಾಲಿಕವಾಗಿ ಮರಳಿ. ಪ್ರಮುಖವಾಗಿ ಪಶ್ಚಿಮ ಗಡಿಯ ಸುರಕ್ಷಿತ ಜಾಗಗಳಿಗೆ ಮರಳಿ ಎಂದು ಸೂಚನೆ ನೀಡಲಾಗಿದೆ.
ಜೊತೆಗೆ ತುರ್ತು ಸಹಾಯವಾಣಿ ಮತ್ತು ನಿಯಂತ್ರಣ ಕೊಠಡಿ ಸಂಖ್ಯೆಗಳನ್ನು ನೀಡಲಾಗಿದೆ.