ಕುಣಿಗಲ್: ಕೇಂದ್ರ ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಅವೈಜ್ಞಾನಿಕ ಲಾಕ್‌ಡೌನ್ ಜಾರಿಗೆ ತಂದು ದೇಶದ 130 ಕೋಟಿ ಜನರಿಗೆ ಅನ್ಯಾಯ ಮಾಡಿದೆ ಎಂದು ಸಂಸದ ಡಿ.ಕೆ.ಸುರೇಶ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಕೋವಿಡ್ 19 ತಡೆಗಾಗಿ ಕುಣಿಗಲ್ ಕ್ಷೇತ್ರದ 60 ಸಾವಿರ ಕುಟುಂಬದ 2 ಲಕ್ಷ ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಉಚಿತವಾಗಿ ವಿತರಿಸಿ ಮಾತ ನಾಡಿ, ಪ್ರಧಾನಿ ಮೋದಿ ಅವರು ಕ್ಯಾಂಡಲ್ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದರು, ಜನರು ದೀಪ ಹಚ್ಚಿದರು, ಗಂಟೆ ಹೊಡೆ ದರು, ಇದರಿಂದ ಏನಾದರೂ ಪ್ರಯೋ ಜನವಾಯ್ತು ಎಂದು ಪ್ರಶ್ನಿಸಿದರು.
ಯಾವುದೇ ಪೂರ್ವ ಸಿದ್ಧತೆ ಮತ್ತು ಯೋಜನೆ ಸರ್ಕಾರದ ಬಳಿ ಇಲ್ಲದೆ, ವಿಜ್ಞಾನಿಗಳ, ವೈದ್ಯರ ಹಾಗೂ ವಿಪಕ್ಷದವರ ಸಲಹೆ ಪಡೆಯದೇ ಚೀನಾದವರು ಲಾಕ್ ಡೌನ್ ಮಾಡಿದ್ದಾರೆ ಎಂದು ಅವೈಜ್ಞಾನಿಕ ವಾಗಿ ದೇಶದಲ್ಲಿ ಲಾಕ್‌ಡೌನ್ ಜಾರಿಗೆ ತಂದು ಸಾರ್ವಜನಿಕರ ಮೇಲೆ ಹೊರೆ ಬೀಳುವಂತಹ ಕೆಲಸ ಮಾಡಲಾಗಿದೆ.
ಪ್ರಧಾನಿ ಲಾಕ್‌ಡೌನ್ ಘೋಷಣೆಯನ್ನು ದೇಶದ 130 ಕೋಟಿ ಜನರು ಚಾಚು ತಪ್ಪದೆ ಪಾಲಿಸಿದ್ದಾರೆ. ಆದರೆ ಅವರ ಬಗ್ಗೆ ಕರುಣೆ ತೋರಿಸುವಂತಹ ಕನಿಷ್ಠ ಸೌಜನ್ಯ ತೊರಲಿಲ್ಲ ಹಾಗೂ ಕೋವಿಡ್ 19 ತಡೆಗಟ್ಟು ವಲ್ಲಿ ಸರ್ಕಾರಗಳು ವಿಫಲಗೊಂಡಿವೆ ಎಂದು ಆರೋಪಿಸಿದರು. ಜನರಲ್ಲಿ ರೋಗ ನಿರೋಧ ಶಕ್ತಿ ವೃದಿಟಛಿಸುವ ಮಾತ್ರೆ ವಿತರಣೆ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ಈ ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುವ ಮಾತ್ರೆಗಳನ್ನು ಸಂಸದ ಡಿ.ಕೆ. ಸುರೇಶ್ ಸಹಕಾರದೊಂದಿಗೆ ಉಚಿತವಾಗಿ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.