Advertisement

ಆನ್ ಲೈನ್ ಮೂಲಕ ಖರೀದಿಗೆ ಕಾನೂನು ಮಿತಿ?

10:01 AM Dec 18, 2019 | Hari Prasad |

ಹೊಸದಿಲ್ಲಿ: ಇ- ಕಾಮರ್ಸ್‌ ವೆಬ್‌ಸೈಟ್‌ ಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಮತ್ತು ನಿಯಂತ್ರಣ ಇರಿಸಲು ರಚಿಸಲಾಗುತ್ತಿರುವ ಕಾನೂನಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿ ನಡೆಸುವ ಖರೀದಿ ಅಂಶಗಳೂ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.

Advertisement

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಪಿನ್‌ಟೆರೆಸ್ಟ್‌ ಮತ್ತು ವಾಟ್ಸ್‌ ಆ್ಯಪ್‌ಗಳ ಮೂಲಕ ನಡೆಸಲಾಗುತ್ತಿರುವ ವಾಣಿಜ್ಯಿಕ ವಹಿವಾಟುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಗ್ರಾಹಕರಿಗಾಗಿ ಇರುವ ರಾಷ್ಟ್ರೀಯ ದೂರು ಸ್ವೀಕರಿಸುವ ವ್ಯವಸ್ಥೆಯಲ್ಲಿ ಮತ್ತು ಆಯಾ ವೆಬ್‌ಸೈಟ್‌ಗಳ ಗ್ರಾಹಕರ ಕುಂದು-ಕೊರತೆ ಪರಿಹರಿ ಸುವ ವಿಭಾಗಕ್ಕೆ ವಂಚನೆಯ ದೂರುಗಳೇ ಹೆಚ್ಚಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆ ಸಚಿವಾಲಯ ಈ ಬಗ್ಗೆ ಕಾನೂನು ಸಿದ್ಧಪಡಿಸು ತ್ತಿದ್ದು, ಅದರಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಪಿನ್‌ಟೆರೆಸ್ಟ್‌ ಮತ್ತು ವಾಟ್ಸ್‌ಆ್ಯಪ್‌ಗ್ಳ ಮೂಲಕ ನಡೆಸಲಾಗುವ ವಹಿವಾಟುಗಳನ್ನು ನಿಯಮದ ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ನಡೆಸುತ್ತಿದೆ. ಸ್ನೇಹಿತರಿಂದ ಸ್ನೇಹಿತರಿಗೆ (ಪೀರ್‌2 ಪೀರ್‌) ಮಾದರಿಯಲ್ಲಿ ಈ ವಹಿವಾಟು ನಡೆಯುತ್ತಿದೆ, ಅದನ್ನು ನಿಯಮ ವ್ಯಾಪ್ತಿಗೆ ತರಬೇಕಾಗಿದೆ. ಈ ಮೂಲಕ ವಂಚನೆ ಪ್ರಕರಣಗಳಿಗೆ ತಡೆಯೊಡ್ಡಲು ಅವಕಾಶ ಸಿಗಲಿದೆ.

ಭಾರತದಲ್ಲಿ ವಾಟ್ಸ್‌ಆ್ಯಪ್‌ 400 ಮಿಲಿಯ, ಫೇಸ್‌ಬುಕ್‌ 250 ಮಿಲಿಯ ಬಳಕೆದಾರರು ಇದ್ದಾರೆ. ಅಧಿಕಾರಿಗಳ ಪ್ರಕಾರ ಗ್ರಾಹಕರ ಕಾಯ್ದೆಯ ನಿಯಮಗಳ ಅನ್ವಯ ಆಂಶಿಕವಾಗಿ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ವಾಟ್ಸ್‌ಆ್ಯಪ್‌, ಟೆಲೆಗ್ರಾಂಗಳಲ್ಲಿ ಸದ್ಯದ ಸ್ಥಿತಿಯಲ್ಲಿ ವ್ಯವಹಾರದ ಮೂಲ ಪತ್ತೆ ಹಚ್ಚಲು ಸಾಧ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next