ಬೆಂಗಳೂರು: ಪರಿಸರ ಸ್ನೇಹಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯದಿಂದ ನೀಡಲಾಗುವ ಪ್ರಶಸ್ತಿಗೆ ಬೆಂಗಳೂರಿನ “ಟೆಂಡರ್‌ಶ್ಯೂರ್’ ಯೋಜನೆ ಸಿಕ್ಕಿದೆ.
ನಗರದ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ನಗರದ ಟೆಂಡರ್‌ಶ್ಯೂರ್ ರಸ್ತೆಗಳು ಮಾದರಿಯಾಗಿದ್ದು, ಜನ ಸಂಚಾರಕ್ಕೆ ವಿಶಾಲವಾದ ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್‌ಗಳನ್ನು ಒಳಗೊಂಡ ಟೆಂಡರ್ ಶ್ಯೂರ್ ರಸ್ತೆಗಳನ್ನು “ನಾನ್ ಮೋಟಾರೈಸ್ಡ್ ಟ್ರಾನ್ಸ್‌ಪೊàರ್ಟ್’ ವಿಭಾಗದಲ್ಲಿ “ಬೆಸ್ಟ್ ಎನ್ ಎಂ ಟಿ ಪ್ರಾಜೆಕ್ಟ್’ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಈ ಪ್ರಶಸ್ತಿಗೆ ಮೈಸೂರಿನ ಟ್ರಿಣ್ ಟ್ರಿಣ್ ಯೋಜನೆ ಪಡೆದುಕೊಂಡಿತ್ತು.
ಕೇಂದ್ರ ಸರ್ಕಾರದ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಈ ಪ್ರಶಸ್ತಿಗೆ ಬಿಬಿಎಂಪಿಯನ್ನು ಆಯ್ಕೆ ಮಾಡಿದ ಎಂದು ಎಂಆರ್‌ಟಿಎಸ್ ಉಪ ಕಾರ್ಯದರ್ಶಿ ವಿ.ಎಸ್.ಪಾಂಡೆ ಬಿಬಿಎಂಪಿ ಆಯುಕ್ತರ ಎನ್.ಮಂಜುನಾಥ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಜುನಾಥ ಪ್ರಸಾದ್, ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಚಾರವಾಗಿದೆ. ಪರಿಸರ ಸ್ನೇಹಿ, ಪಾದಚಾರಿಗಳಿಗೆ ಅವಕಾಶ ಹಾಗೂ ಸೈಕಲ್ ಟ್ರ್ಯಾಕ್‌ಗಳನ್ನು ಒಳಗೊಂಡಿರುವುದಕ್ಕೆ ಈ ಟೆಂಡರ್‌ಶ್ಯೂರ್ ರಸ್ತೆಗಳನ್ನು ಪ್ರಶಸ್ತಿಗೆ ಭಾಜನವಾಗಿದೆ ಎಂದರು.
ಕೇಂದ್ರ ಸರ್ಕಾರ ನಗರ ಸಾರಿಗೆ ಇಲಾಖೆ ಪರಿಸರ ಸ್ನೇಹಿ ಯೋಜನೆಯನ್ನು ಉತ್ತೇಜಿಸಿರುವುದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯನ್ನು ಕೇಂದ್ರ ಇಂಧನ ಸಚಿವರು ನಾಗಪುರದ ಚಿಟ್ನಾವಿಸ್ ಸೆಂಟರ್‌ನಲ್ಲಿ ನವೆಂಬರ್ 4ರಂದು ನಡೆಯಲಿರುವ ಹನ್ನೊಂದನೇ ಭಾರತದ ನಗರ ಚಲನಶೀಲತಾ ಸಮಾವೇಶ ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ವಿತರಿಸಲಿದ್ದು, ಪ್ರಶಸ್ತಿ ಪಡೆಯಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್ ಹಾಗೂ ತಂಡವನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.