Advertisement

ಶ್ರೀ ಸತ್ಯ ಪ್ರಮೋದ ತೀರ್ಥರ ಜನ್ಮ ಶತಮಾನೋತ್ಸವ ಪಾದುಕಾ ಶೋಭಾಯಾತ್ರೆ

04:48 PM Mar 16, 2017 | Team Udayavani |

ಡೊಂಬಿವಲಿ: ಉತ್ತರಾಧಿ ಮಠದ ಹಿಂದಿನ ಮಠಾಧೀಶರಾದ ಶ್ರೀ ಸತ್ಯ ಪ್ರಮೋದ ತೀರ್ಥರ ಜನ್ಮ ಶತಮಾನೋತ್ಸವ ವರ್ಷದ ನಿಮಿತ್ತ ತಮಿಳುನಾಡಿನ ಮೂಲ ವೃಂದಾವನದ ಸ್ಥಳವಾದ ತಿರುಕೊಯಿಲೂರಿನಂದಾಶ್ರೀಗಳ ಪಾದುಕೆಗಳ ಭವ್ಯ ಶೋಭಾಯಾತ್ರೆ ಕರ್ನಾಟಕದ ಮುಖಾಂತರ ಮಹಾರಾಷ್ಟ್ರದ ಮುಂಬಯಿ ಉಪ ನಗರವಾದ ಡೊಂಬಿವಲಿಗೆ ಇತ್ತೀಚೆಗೆ ಆಗಮಿಸಿದ್ದು, ಸ್ಥಳೀಯ ಬ್ರಾಹ್ಮಣ ಸಮುದಾಯವು ಅದ್ದೂರಿಯಾಗಿ ಸ್ವಾಗತಿಸಿತು.

Advertisement

ಡೊಂಬಿವಲಿ ಪಶ್ಚಿಮದ ಸೌತ್‌ ಇಂಡಿಯನ್‌ ಹೈಸ್ಕೂಲ್‌ ಸಮೀಪದ ವೇದಮೂರ್ತಿ ರಘೋತ್ತಮಾಚಾರ್ಯ ಮೂಕಾಶಿ, ವೇದಮೂರ್ತಿ ಕೃಷ್ಣಾಚಾರ್ಯ ಜಮದಗ್ನಿ, ರಾಘವೇಂದ್ರ ಜಮದಗ್ನಿ ಮೊದಲಾದವರು ಉಪಸ್ಥಿತರಿದ್ದರು. ಪಾದುಕಾ ಶೋಭಾಯಾತ್ರೆಯನ್ನು ರಾಘವೇಂದ್ರ ಸ್ವಾಮಿಗಳ ಮಠದವರೆಗೂ ಮೆರವಣಿಗೆಯ ಮೂಲಕ ಸಾಗಿತು. ವೇದ ಪಂಡಿತರ ವೇದಘೋಷ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ನಾಮ ಸಂಕೀರ್ತನೆ, ನೃತ್ಯ, ವಿವಿಧ ಪ್ರಾತ್ಯಕ್ಷಿಕೆಗಳು ಶೋಭಾಯಾತ್ರೆಗೆ ಮೆರುಗು ನೀಡಿತು. ಭಕ್ತಾದಿಗಳು ಶ್ರೀಗಳ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವೇದಮೂರ್ತಿ ಪಂಡಿತ್‌ ಕೃಷ್ಣಾಮಾಚಾರ್ಯ ಜಮದಗ್ನಿ ಅವರು ಶ್ರೀ ಸತ್ಯಪ್ರಮೋದರ ಡೊಂಬಿವಲಿಯ ಪ್ರಥಮ ಭೇಟಿಯನ್ನು ಸ್ಮರಿಸಿ ತಮ್ಮ ಹಾಗೂ ಶ್ರೀಗಳ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಶ್ರೀ ಸತ್ಯ ಪ್ರಿಯ ಪ್ರಮೋದತೀರ್ಥ ಅವರ  ಮಧ್ವಮತದ ಸಿದ್ಧಾಂತವನ್ನು ತಿಳಿಸಿದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ನೂರಾರು ಭಕ್ತಾದಿಗಳು, ಸಮಾಜ ಬಾಂಧವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next