Advertisement

ಗಾಂಧಿನಗರ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ

02:17 PM Jan 31, 2018 | |

ಮಹಾನಗರ: ಮಾತೃ ಭಾಷೆಯಲ್ಲಿ ಪಡೆಯುವ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗೆ ಉತ್ತಮ ಸಂಸ್ಕಾರ ಲಭಿಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿಯನ್ನು ಸರಕಾರ ವಹಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಹೇಳಿದರು. ಮಂಗಳೂರಿನ ಉರ್ವ ಗಾಂಧಿನಗರ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ವಿದ್ಯೆ ಕಲಿತ ಶಾಲೆಯ ಋಣ ತೀರಿಸುವ ಕಾರ್ಯ
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ.ಅಜಿತ್‌ ಕುಮಾರ್‌ ರೈ ಮಾಲಾಡಿ ಮಾತನಾಡಿ, ತಾವು ವಿದ್ಯೆ ಕಲಿತ ಶಾಲೆಯ ಋಣ ತೀರಿಸುವ ಮಹತ್ವಾಕಾಂಕ್ಷೆಯಿಂದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಗಾಂಧಿನಗರ ಶಾಲೆಯ ಹಳೆ ವಿದ್ಯಾರ್ಥಿಗಳ ಕಾರ್ಯ ಪ್ರಶಂಸನೀಯ ಎಂದರು.

ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್‌, ಶಾಸಕ ಜೆ.ಆರ್‌.ಲೋಬೋ, ಉದ್ಯಮಿಗಳಾದ ರಾಮಮೋಹನ್‌ ಪೈ, ಕಸ್ತೂರಿ ಪೈ, ವಾಸುದೇವ ರಾವ್‌, ಧರ್ಮರಾಜ್‌, ವೇದವ್ಯಾಸ ಕಾಮತ್‌, ಕಾರ್ಪೊರೇಟರ್‌ ಜಯಂತಿ ಆಚಾರ್‌ ಅವರು ಶುಭ
ಹಾರೈಸಿದರು. ಕರ್ಣಾಟಕ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ, ಶಾಲೆಯ ಹಳೆ ವಿದ್ಯಾರ್ಥಿ ಶ್ರೀಶ ಭಟ್‌ ಅವರು ಸ್ವಸ್ತಿವಾಚನಗೈದರು.

ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷರುಗಳಾದ ಅಣ್ಣಪ್ಪ ಪೈ, ಡಾ| ಬಿ.ಜಿ.ಸುವರ್ಣ, ಅಶೋಕ್‌ ಮೊಲಿ, ಅಧ್ಯಕ್ಷ ಕಿಶೋರ್‌ ಡಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತುಳಸಿದಾಸ್‌ ಉರ್ವ, ಕಾರ್ಯದರ್ಶಿ ಅರುಣ್‌ ಕುಮಾರ್‌ ಉರ್ವ, ಉಪಾಧ್ಯಕ್ಷ ಲೋಕನಾಥ ಬಂಗೇರ, ಕೋಶಾಧಿಕಾರಿ ಲೋಕೇಶ್‌ ಚೆಟ್ಟಿಯಾರ್‌, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತಾರಾನಾಥ ಉರ್ವ, ಶಾಲೆಯ ಮುಖ್ಯ ಶಿಕ್ಷಕಿ ಯಶೋದಾ, ಹಿರಿಯ ಶಿಕ್ಷಕಿ ವೀಣಾ ಬಿ., ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು.

ಸಮ್ಮಾನ 
ಈ ಸಂದರ್ಭದಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಡಾ| ವಿಠಲದಾಸ್‌ ಪೈ ಅವರನ್ನು ಸಮ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next