Advertisement

ಮಾಯಾವಿಗೆ ಸೆನ್ಸಾರ್‌

04:44 AM Jun 26, 2020 | Lakshmi GovindaRaj |

ಅ್ಯಕ್ರೊಮೊಟಾಪ್ಸಿಯಾ ನ್ಯೂನತೆ ಮತ್ತು ಹಲವು ಸಾವು-ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನ ಕಥಾಹಂದರ ಹೊಂದಿರುವ, ನೈಜ ಘಟನೆಗಳ ಕುರಿತಾದ ವಿನೂತನ ಹೆಸರಿನ ಮೇಲೊಬ್ಬ ಮಾಯಾವಿ  ಚಿತ್ರವನ್ನು ಸೆನ್ಸಾರ್‌ ವೀಕ್ಷಿಸಿ “ಎ’ ಪ್ರಮಾಣ ಪತ್ರ ನೀಡಿದೆ.

Advertisement

ಜನುಮದ ಜೋಡಿ’ಯ ಕೋಲುಮಂಡೆ ಜಂಗಮದೇವ  ಹಾಡಿನ ಮೂಲಕ ಖ್ಯಾತರಾಗಿದ್ದ ಗಾಯಕ, ಸಂಗೀತ ಸಂಯೋಜಕ, ರಾಜ್ಯ ಪ್ರಶಸ್ತಿ ವಿಜೇತ ದಿ:ಎಲ್. ಎನ್‌.ಶಾಸ್ತ್ರೀ ಅವರು ಸಂಗೀತ  ನೀಡಿ, ಕಳ್ಳಕೊಳಲ ಹಿಡಿದವನೊಬ್ಬ ಗೋಪಾಲ ಗೀತೆಗೆ ಧ್ವನಿಯಾಗಿರುವ ಕೊನೆಯ ಚಿತ್ರವಿದು. ಬಿ.ನವೀನ್‌ ಕೃಷ್ಣ ಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಕದ್ರಿ ಮಣಿಕಾಂತ್‌ ಅವರ ಹಿನ್ನಲೆ ಸಂಗೀತವಿದ್ದು,  ಉಪೇಂದ್ರ ನಿರ್ದೇಶನದ “ಓಂ’ ಚಿತ್ರಕ್ಕೆ ಸಹಾಯಕ ಸಂಕಲನಕಾರರಾಗಿದ್ದ ಕೆ.ಗಿರೀಶ್‌ ಕುಮಾರ್‌ ಸಂಕಲನ ಮಾಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ದೀಪಿತ್‌ ಹೊತ್ತಿದ್ದರೆ, ನೃತ್ಯ ಸಂಯೋ ಜನಯನ್ನು ರಾಮು ಮಾಡಿದ್ದಾರೆ  ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಚಿತ್ರದ ನಾಯಕನಾದರೆ, ಅನನ್ಯ ಶೆಟ್ಟಿ ನಾಯಕಿ.

ಚಕ್ರವರ್ತಿಚಂದ್ರಚೂಡ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರಕ್ಕೆ ಚಿತ್ರಕಥೆ,ಸಾಹಿತ್ಯ,ಸಂಭಾಷಣೆ ಬರೆದಿದ್ದಾರೆ.  ಉಳಿದಂತೆ ಕೃಷ್ಣಮೂರ್ತಿ ಕವತ್ತಾರ್‌, ಎಂ.ಕೆ.ಮಠ, ಬೆನಕ ನಂಜಪ್ಪ, ಪವಿತ್ರಾ ಜಯರಾಮ್, ಮುಖೇಶ್‌ ಮುಂತಾದವರು ನಟಿಸಿದ್ದಾರೆ. ಪುತ್ತೂರು ಭರತ್‌ ಮತ್ತು ತನ್ವಿ ಅಮಿನ್‌ ಕೊಲ್ಯ ಜಂಟಿಯಾಗಿ ಶ್ರೀ ಕಟೀಲ್‌ ಸಿನಿಮಾಸ್‌ ಮೂಲಕ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next