ಬೇತಮಂಗಲ: ಕೆರೆ ಅಂಗಳದಲ್ಲಿದ್ದ ತಾತ್ಕಾಲಿಕ ಸ್ಮಶಾನವು ಜಲಾವೃತಗೊಂಡು ಅಂತ್ಯ ಸಂಸ್ಕಾರ ಸಾಧ್ಯ ಆಗದ ಹಿನ್ನೆಲೆಯಲ್ಲಿ ಕಣ್ಣೂರು ಗ್ರಾಮಸ್ಥರು ಪರದಾಡಿದ ಘಟನೆ ನಡೆಯಿತು.
ಗ್ರಾಮ ಬಳಿಯ ಕಂಗಾಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ದಶಕಗಳಿಂದಲೂ ಶಾಶ್ವ ತಸ್ಮಶಾನ ಜಾಗ ಇಲ್ಲ. ಕೆರೆ ಅಂಗಳದಲ್ಲೇ ಶವ ಸಂಸ್ಕಾರ ಮಾಡುತ್ತಿದ್ದರು. ಇತ್ತೀಚಿಗೆ ಸುರಿದ ಮಳೆಯಿಂದ ತಾತ್ಕಾಲಿಕ ಸ್ಮಶಾನವು ಜಲಾವೃತಗೊಂಡಿತ್ತು. ನಂತರ ಈ ವಾರದಲ್ಲೇ 3 ಮಂದಿ ಮೃತಪಟ್ಟಿದ್ದು, ಅವರಿಗೆ ಸ್ವಂತ ಜಾಗ ಇದ್ದ ಕಾರಣ, ಶವ ಸಂಸ್ಕಾರ ಮಾಡಿದರು.
ಅಧಿಕಾರಿಗಳಿಗೆ ಮಾಹಿತಿ: ಆದರೆ, ಶುಕ್ರವಾರ ಗ್ರಾಮದ ಪದ್ಮಮ್ಮ(45) ಎಂಬಾಕೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಈಕೆಗೆ ಯಾವುದೇ ಸ್ವಂತ ಜಮೀನಿಲ್ಲ. ಶವ ಸಂಸ್ಕಾರ ಮಾಡಲುಚಿಂತೆ ಕಾಡಿತ್ತು. ತಕ್ಷಣ ಗ್ರಾಪಂ ಸದಸ್ಯ ಮೂರ್ತಿ, ನಾಗಮಣಿ,¤ದಲಿತ ಸಂಘಟನೆಯ ಮರವೂರು ಚಂದ್ರಶೇಖರ್, ಪ್ರೇಮ್ ಕುಮಾರ್ ಗ್ರಾಪಂ ಪಿಡಿಒ, ಅಧ್ಯಕ್ಷರು, ತಹಶೀಲ್ದಾರ್, ಪೊಲೀಸ್ ಇಲಾಖೆಗೆ ವಿಷಯ ತಿಳಿಸಿದರು. ಸರ್ವೆ ಮಾಡಿ ಸಂಸ್ಕಾರ ನಡೆಸಿ: ತಹಶೀಲ್ದಾರ್ ಸೂಚನೆ ಮೇರೆಗೆ ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಗ್ರಾಮ ಲೆಕ್ಕಿಗ ಮೋಹನ್‌ಲಾಲ್, ಸ್ಥಳಕ್ಕೆ ಆಗಮಿಸಿ, ಜಾಗ ಗುರುತಿಸಿ ಶವ ಸಂಸ್ಕಾರ ಮಾಡಲು ಸೂಚಿಸಿದರು.
ಆದರೆ, ಒತ್ತುವರಿ ಮಾಡಿಕೊಂಡಿದ್ದ ರೈತ ಅವಕಾಶ ನೀಡುವುದಿಲ್ಲ. ಇದು ಸರ್ವೆ 63, ಸ್ವಂತ ಜಮೀನು ಎಂದು ಹಠ ಮಾಡಿದ. ಸರ್ವೆ ನಡೆಸಿ ಶವ ಸಂಸ್ಕಾರ ಮಾಡಿ ಎಂದು ಅಡ್ಡಿಪಡಿಸಿದರು.
ಪೊಲೀಸ್ ಭದ್ರತೆ: ಗ್ರಾಮದ ಮಹಿಳೆಯರು, ವೃದ್ಧರು ಮತ್ತು ಮೃತ ಕುಟುಂಬಸ್ಥರು ಜಮಾಯಿಸಿದರು. ಗಲಾಟೆಗಳು ನಡೆಯುವ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಕ್ಯಾಸಂಬಳ್ಳಿ ಪಿಎಸ್ಸೆ„ ಆನಂದಮೂರ್ತಿ, ಸಿಬ್ಬಂದಿ ಶ್ರೀನಿವಾಸ್ ಬಂದೋಬಸ್ತ್ ಏರ್ಪಡಿಸಿದ್ದರು. ನಂತರ ಒತ್ತುವರಿದಾರ ಶೀಘ್ರ ಸರ್ವೆ ಮಾಡಿಕೊಡುವಂತೆ ಹೇಳಿ ಸುಮ್ಮನಾದರು.
ಪಿಡಿಒ ಸತ್ಯವತಿ, ಆರ್‌ಐ ನಾರಾಯಣಸ್ವಾಮಿ, ಗ್ರಾಮ ಲೆಕ್ಕಿಗ ಮೋಹನ್‌ಲಾಲ್, ಗ್ರಾಪಂ ಕರ ವಸೂಲಿಗಾರ ಆನಂದ್, ಪಿಎಸ್ಕೈ ಆನಂದಮೂರ್ತಿ, ಶ್ರೀನಿವಾಸ್, ಕರ್ನಾಟಕ ದಲಿತಸೇನೆಯ ಚಂದ್ರಶೇಖರ್, ಗ್ರಾಪಂ ಸದಸ್ಯ ಮೂರ್ತಿ, ಮುಖಂಡರಾದ ರಾಜು, ಗೋಪಿ, ಆಸೋಕ್, ನಾರಾಯಣಪ್ಪ,ಕಾರ್ತಿಕ್, ವಿಜಿಕುಮಾರ್, ಪ್ರೇಮ್, ನಾಗಮಣಿ, ಅಮುದಾ, ಮಹಿಳೆಯರು, ಗ್ರಾಮಸ್ಥರು ಇದ್ದರು.