Advertisement
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅವರು ಮಾತನಾಡಿ, ಕ್ರೀಡೆಗಳು ಸೌಹಾರ್ದ ಮತ್ತು ಬಾಂಧವ್ಯ ವೃದ್ಧಿಗೆ ಸಹಾಯಕ. ನಶಿಸುತ್ತಿರುವ ಕ್ರೀಡೆಗಳಿಗೆ ತಾರಾಮೆರುಗು ನೀಡಿ ಜನಮನ್ನಣೆಗೊಳಿಸಬೇಕಿದೆ ಎಂದು ತಿಳಿಸಿದರು.
ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸ್ಥಾಪಕಾಧ್ಯಕ್ಷ ಡಾ| ಮಂಜುನಾಥ ಭಂಡಾರಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಬಡ್ಡಿ ಪೂರಕವಾಗಿದೆ. ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಅಂತಾರಾಷ್ಟ್ರೀಯ ಲೀಗ್ ರೆಫ್ರಿಗಳಾದ ಉದಯ ಚೌಟ, ಪ್ರೇಮನಾಥ ಉಳ್ಳಾಲ್, ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲು, ಮಹಾಬಲ ಪೂಜಾರಿ ಕಡಂಬೋಡಿ, ತುಳು ಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.
Related Articles
ಪಂದ್ಯಾವಳಿಯಲ್ಲಿ 7 ಪುರುಷರ ಹಾಗೂ 6 ಮಹಿಳೆಯರ ಸೇರಿದಂತೆ ಒಟ್ಟು 13 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪುರುಷರ ಹಾಗೂ ಮಹಿಳೆಯರ ಪಂದ್ಯಾಟ ಏಕಕಾಲದಲ್ಲಿ ನಡೆಯಿತು. ಕಬಡ್ಡಿ ವೀಕ್ಷಿಸಲು ನೂರಾರು ಮಂದಿ ಪ್ರೇಕ್ಷಕರು ಆಗಮಿಸಿದ್ದು, ಕಬಡ್ಡಿ ಆಟಗಾರರನ್ನು ಹುರಿದುಂಬಿಸಿದರು.
Advertisement