Advertisement

ಬಣ್ಣದ ಲೋಕ ಟು ಪಾಲಿಟಿಕ್ಸ್:‌ ಈ ಬಾರಿ ಚುನಾವಣೆಗೆ ನಿಂತು ಸೋತ ಪ್ರಮುಖ ಸಲೆಬ್ರಿಟಿಗಳಿವರು

05:44 PM Jun 05, 2024 | Team Udayavani |

ಲೋಕಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯ ಕಂಡಿದೆ. ಆದರೆ ರಾಜಕೀಯ ಪಕ್ಷಗಳು ಸರ್ಕಾರ ರಚನೆಗೆ ಕಸರತ್ತು ಶುರು ಮಾಡಿವೆ.

Advertisement

ಕಾಂಗ್ರೆಸ್‌ – ಬಿಜೆಪಿ ನೇತೃತ್ವದ ಒಕ್ಕೂಟಗಳು ʼಕಿಂಗ್‌ ಮೇಕರ್ಸ್‌ʼ ಗಳನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿ ನಿರತವಾಗಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಚುನಾವಣ ಅಖಾಡದಲ್ಲಿ ಚಿತ್ರರಂಗದ ತಾರೆಯರು ಅದೃಷ್ಟ ಪರೀಕ್ಷೆಗೆ ನಿಂತಿದ್ದರು. ಇದರಲ್ಲಿ ಕೆಲವರು ಗೆದ್ದು ಸಂಸತ್‌ ಪ್ರವೇಶಿಸಿದರೆ, ಇನ್ನು ಕೆಲವರು ಸೋತು ಮುಖ ಸಪ್ಪೆ ಮಾಡಿಕೊಂಡಿದ್ದಾರೆ.

ಬಿಜೆಪಿಯಲ್ಲಿ ನಾಯಕಿಯರಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿ, ನವನೀತ್‌ ಕೌರ್‌ ರಾಣಾ ಸೇರಿದಂತೆ ಭೋಜ್‌ ಪುರಿ ಚಿತ್ರರಂಗದ ಖ್ಯಾತ ಪವನ್‌ ಸಿಂಗ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ಚುನಾವಣೆಯಲ್ಲಿ ಸೋಲು ಕಂಡ ಸೆಲೆಬ್ರಿಟಿಗಳು..

ಸ್ಮೃತಿ ಇರಾನಿ: ಕಳೆದ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಕುಡಿ ರಾಹುಲ್‌ ಗಾಂಧಿ ಅವರಿಗೆ ಸೋಲಿನ ರುಚಿ ತೋರಿಸಿದ್ದ ಸ್ಮೃತಿ ಇರಾನಿ ಈ ಬಾರಿ ಆಘಾತಕಾರಿ ಸೋಲು ಕಂಡಿದ್ದಾರೆ.  ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ  ಅಮೇಠಿ ಕ್ಷೇತ್ರವನ್ನು ಹೇಗಾದರೂ ಮಾಡಿ ಮತ್ತೆ ಕೈವಶ ಮಾಡಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್‌ ಕಿಶೋರಿ ಲಾಲ್‌ ಶರ್ಮಾ ಅವರಿಗೆ ಟಿಕೆಟ್‌ ನೀಡಿತ್ತು.

Advertisement

ಅವರ ಮುಂದೆ ಸ್ಮೃತಿ ಇರಾನಿ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಆದರೆ ಸ್ಮೃತಿ ಇರಾನಿ ವಿರುದ್ಧ ಕಿಶೋರಿ ಲಾಲ್ 1,67,196 ಮತಗಳ ಅಂತರದಿಂದ ದೊಡ್ಡಮಟ್ಟದ ಗೆಲುವನ್ನು ಪಡೆದುಕೊಂಡಿದ್ದಾರೆ.

ದಿನೇಶ್ ಲಾಲ್ ಯಾದವ್: ಭೋಜ್‌ ಪುರಿ ಚಿತ್ರರಂಗದ ಖ್ಯಾತ ನಟ, ಗಾಯಕ ಹಾಗೂ ಬಿಗ್‌ ಬಾಸ್‌ ಕಾರ್ಯಕ್ರಮದ ಮಾಜಿ ಸ್ಪರ್ಧಿ ದಿನೇಶ್‌ ಲಾಲ್‌ ಯಾದವ್‌ ಉತ್ತರ ಪ್ರದೇಶದ ಅಜಂಗಢ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಇವರನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಧರ್ಮೇಂದ್ರ ಯಾದವ್ ಸೋಲಿಸಿದ್ದಾರೆ. 1,61,035 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಪವನ್‌ ಸಿಂಗ್:‌ ಬಿಹಾರದ ಕರಕಟ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭೋಜ್‌ ಪುರಿ ಚಿತ್ರರಂಗದ ನಟ ಪವನ್‌ ಸಿಂಗ್‌ ಅವರನ್ನು ಸಿಪಿಐನ ರಾಜಾ ರಾಮ್ ಸಿಂಗ್ ಸೋಲಿಸಿದ್ದಾರೆ. ರಾಜಾ ರಾಮ್ ಸಿಂಗ್ 3,805,81 ಮತಗಳನ್ನು ಗಳಿಸಿದರೆ, ಪವನ್ ಸಿಂಗ್ 2,747,23 ಮತಗಳನ್ನು ಪಡೆದಿದ್ದರು.

ರಾಜ ಬಬ್ಬರ್: ನಟ ಕಂ ರಾಜಕಾರಣಿ ರಾಜ ಬಬ್ಬರ್‌ ಈ ಬಾರಿ ಗುಡಗಾಂವ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ್ದರು. ಇವರನ್ನು ಬಿಜೆಪಿಯ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ಸೋಲಿನ ರುಚಿ ತೋರಿಸಿದ್ದಾರೆ. 75,079 ಮತಗಳ ಅಂತರದಿಂದ ರಾಜ ಬಬ್ಬರ್‌ ಸೋತಿದ್ದಾರೆ.

ಹಿರಣ್ಮೋಯ್ ಚಟ್ಟೋಪಾಧ್ಯಾಯ: ಬೆಂಗಾಲಿ ಸಿನಿಮಾದ ನಟ ಹಿರಣ್ಮೋಯ್ ಚಟ್ಟೋಪಾಧ್ಯಾಯ ಬಿಜೆಪಿ ಪಕ್ಷದಿಂದ ಘಟಾಲ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗೆಲುವಿನ ನಿರೀಕ್ಷೆಯಲ್ಲಿದ್ದ ಅವರು ಸೋಲು ಕಂಡಿದ್ದಾರೆ. ಟಿಎಂಸಿಯ ದೀಪಕ್ ಅಧಿಕಾರಿ 182868 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಲಾಕೆಟ್ ಚಟರ್ಜಿ: ಬೆಂಗಾಳದ ನಟಿ ಕಂ ರಾಜಕಾರಣಿ ಲಾಕೆಟ್ ಚಟರ್ಜಿ ಹೂಗ್ಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ ಟಿಎಂಸಿಯ ರಚನಾ ಬ್ಯಾನರ್ಜಿ ವಿರುದ್ಧ ಅವರು ಸೋತಿದ್ದಾರೆ.  60,000 ಮತಗಳ ಅಂತರದಿಂದ ಲಾಕೆಟ್‌ ಅವರು ಸೋಲು ಕಂಡಿದ್ದಾರೆ.

ನವನೀತ್‌ ರಾಣಾ: ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಟಿ ಕಂ ರಾಜಕಾರಣಿ ನವನೀತ್‌ ರಾಣ ಕಾಂಗ್ರೆಸ್ ನ ಬಲವಂತ್ ವಾಂಖೆಡೆ‌ ವಿರುದ್ಧ ಸೋಲು ಕಂಡಿದ್ದಾರೆ.  19,731 ಮತಗಳ ಅಂತರದಿಂದ ಅವರು ಸೋಲು ಕಂಡಿದ್ದಾರೆ.

2019 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾದ ನವನೀತ್‌ ಟಾಲಿವುಡ್‌ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next