Advertisement
ಕುಡ್ಲ ಜುಗಾರಿ ವಾರಿಯರ್ಸ್ ತಂಡದ ನಾಯಕ ರೂಪೇಶ್ ಶೆಟ್ಟಿ ಅವರು ಬುಧವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಯಾಂಡಲ್‌ವುಡ್ ಮಂದಿ ನಡೆಸುವ ಲಗೋರಿ ಪಂದ್ಯಾಟಗಳಲ್ಲಿ ಮೊದಲ ಬಾರಿಗೆ ಕರಾವಳಿಯಿಂದ ತಂಡಗಳು ಭಾಗವಹಿಸುತ್ತಿವೆ. ಮುಖ್ಯವಾಗಿ ಕುಡ್ಲ ಜುಗಾರಿ ವಾರಿಯರ್ಸ್ ಹಾಗೂ ಉದಯ ಬಲ್ಲಾಳ್‌ಬಾಗ್ ಅವರ ಬಿರುವೆರ್ ಕುಡ್ಲ ತಂಡಗಳು ಭಾಗವಹಿಸಲಿವೆ. ಈ ಪಂದ್ಯಾಟದಲ್ಲಿ 12 ತಂಡಗಳು ಇರಲಿದ್ದು, ಮಂಗಳೂರು ಮೂಲದ ಮಾಲಕರು ಇರುವ ಮತ್ತೆರಡು ತಂಡಗಳು ಕಾಣಿಸಿಕೊಳ್ಳಲಿವೆ ಎಂದರು.
ಕುಡ್ಲ ಜುಗಾರಿ ವಾರಿಯರ್ಸ್ ತಂಡದ ಮಾಲಕ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸ್ಲಂ ಮೋರ್ಚಾದ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ಲಗೋರಿ ತಂಡದಲ್ಲಿ ರೂಪೇಶ್ ನಾಯಕನಾಗಿ ಕಾಣಿಸಿಕೊಂಡರೆ ಉಪನಾಯಕನಾಗಿ ಅನೂಪ್ ಸಾಗರ್ ಜತೆಯಲ್ಲಿ ರಾಜೇಶ್ ಸ್ಕೈಲಾರ್ಕ್, ರಾಹುಲ್ ಅಮೀನ್, ಸೌರಭ್ ಭಂಡಾರಿ, ಮನೋಜ್ ಪುತ್ತೂರು, ಅರುಣ್ ಶೆಟ್ಟಿ ಕಡಂದಲೆ, ಆರಾಧ್ಯ ಶೆಟ್ಟಿ, ವಿದ್ಯಾಶ್ರೀ, ನಿಕಿತ್ ಕೊಟ್ಟಾರಿ, ರಿತೇಶ್ ಬಂಗೇರ, ನವೀನ್ ಶೆಟ್ಟಿ, ಪ್ರಜ್ಞೆàಶ್ ಶೆಟ್ಟಿ, ಸೂರಜ್ ಪಾಂಡೇಶ್ವರ, ಪೂಜಾ ಶೆಟ್ಟಿ, ರಂಜಿತಾ ಲೂವಿಸ್, ಸ್ವಾತಿ ಬಂಗೇರ, ಪ್ರಶಾಂತ್ ಕಂಕನಾಡಿ, ತಾನುಜ ಪವರ್, ಶ್ರೇಯಾದಾಸ್ ಹಾಗೂ ತಂಡದ ಮ್ಯಾನೇಜರ್ ಆಗಿ ಅಸYರ್ ಮುಡಿಪು ಕಾಣಿಸಿಕೊಳ್ಳಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಂಡದ ಮ್ಯಾನೇಜರ್ ಅಸYರ್ ಮುಡಿಪು, ಪ್ರಮುಖರಾದ ಅನೂಪ್ ಸಾಗರ್, ರಾಜೇಶ್ ಸ್ಕೈಲಾರ್ಕ್, ಅರುಣ್ ಶೆಟ್ಟಿ ಕಡಂದಲೆ, ವಿದ್ಯಾಶ್ರೀ ಮುಂತಾದವರು ಉಪಸ್ಥಿತರಿದ್ದರು.